ಯಾದಗಿರಿ | ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಜೊತೆ ಸಂಸ್ಕಾರ ಕೊಡಿಸಿ : ಉಮೇಶ ಕೆ.ಮುದ್ನಾಳ
ಯಾದಗಿರಿ: ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಜೊತೆಗೆ ಸಂಸ್ಕಾರ ಕೊಡಿಸಿದಾಗ ಮಾತ್ರ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ ಅವರು ಹೇಳಿದರು.
ನಗರದ ಗಂಜ್ ಪ್ರದೇಶದಲ್ಲಿರುವ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮೆಕ್ಯಾನಿಕರ ಮತ್ತು ಮಾಲಕರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರದಿಂದ ಬರುವಂತಹ ಸಾಲ ಸೌಲ್ಯಭ್ಯಗಳನ್ನು ಪಡೆಯದೆ ಮೆಕ್ಯಾನಿಕರರು ಮತ್ತು ಮಾಲಕರು ವಂಚಿತರಾಗಿದ್ದು, ದುರದೃಷ್ಟಕರ ಸಂಗತಿಯಾಗಿದೆ. ಜಿಲ್ಲೆಯಾಗಿ ಸುಮಾರು 15 ವರ್ಷ ಗತಿಸಿದರೂ, ಯಾದಗಿರಿ ಜಿಲ್ಲೆಯು ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿಯಲು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದರು.
ಕೃಷಿ ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಉಳ್ಳವರ ಮತ್ತು ದಲ್ಲಾಳಿಗಳ ಪಾಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಪ್ಪ ಕೌಳೂರು, ಹನುಮಂತ ಆರ್ಯರ್, ಮುಹಮ್ಮದ್ ಶಫಿ, ಬನ್ನಪ್ಪಗೌಡ ಯಲ್ಲೇರಿ, ಮುಹಮ್ಮದ್ ಗೌಸ್ ಯಾದಗಿರಿ, ಮುಹಮ್ಮದ್ ಕರೀಮ್, ಸೈಯದ್ ಶಿರಾಜುದ್ದಿನ್, ಮುಹಮ್ಮದ್ ನಿಸ್ಸಾರ್, ವೀರಣ್ಣ ಯಳವಾರ, ಜಲಾಲ ಸಾಬ್ ಯಾದಗಿರಿ, ಚಾಂದ್ ಪಾಷಾ ಯಾದಗಿರಿ, ಪ್ರಭು ಹಯ್ಯಾಳ, ಎಂ.ಡಿ.ಉಮರ್, ಮುಹಮ್ಮದ್ ಜಲಾಲುದ್ದೀನ್, ಬಾಬರ್ ಅಲಿಮುದ್ದಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.