×
Ad

ಯಾದಗಿರಿ | ಕೂಡಲ ಸಂಗಮ, ಸಂಗೊಳ್ಳಿ ರಾಯಣ್ಣ ಮಾದರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರಾಧಿಕಾರ ರಚನೆಗೆ ಆಗ್ರಹ

Update: 2025-02-18 17:40 IST

ಯಾದಗಿರಿ : ಕೂಡಲ ಸಂಗಮ, ಸಂಗೊಳ್ಳಿ ರಾಯಣ್ಣ ಮಾದರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರಾಧಿಕಾರ ರಚನೆಗೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ ಅವರು ಆಗ್ರಹಿಸಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಕಾಯಕ ಕ್ಷೇತ್ರ ಹಾಗೂ ಐಕ್ಯ ಸ್ಥಳವನ್ನು ಬಜೆಟ್ ನಲ್ಲಿ ಪ್ರಾಧಿಕಾರ ರಚನೆಗೆ ಆಗ್ರಹಿಸಿದ್ದಾರೆ.

ಇಲ್ಲಿಯೇ ಮೂಲ ಗದ್ದುಗೆಯಿದೆ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ, ಬೋಯಿ, ಸುಣಗಾರ ಇತ್ಯಾದಿ ಸಮನಾರ್ಥಕ ಪದಗಳ ಸಮಾಜದ ಸಾಂಸ್ಕೃತಿಕ ನಾಯಕರು. ಕೂಡಲ ಸಂಗಮ, ಸಂಗೊಳ್ಳಿ ರಾಯಣ್ಣ-ಕಾಗಿನಲೆ ಪ್ರಾಧಿಕಾರದ ಮಾದರಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ಪ್ರಾಧಿಕಾರವನ್ನು ಪ್ರಸ್ತುತ ಬಜೆಟ್ ನಲ್ಲಿ ಘೋಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಪ್ರಾಧಿಕಾರಕ್ಕೆ ಚೌಡಯ್ಯದಾನಪುರದಲ್ಲಿರುವ 100 ಎಕರೆ ಸರ್ಕಾರಿ ಜಮೀನು ಹಸ್ತಾಂತರಿಸಿ ಇದರ ಅಭಿವೃದ್ಧಿಗೆ ರೂ.250.00 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಕಾಯ್ದಿರಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. 

ವಿಠ್ಠಲ್ ಹೇರೂರ್ ಅವರ ಹೋರಾಟದಿಂದ ಎಚ್ಚೆತ್ತ ಸರ್ಕಾರ ಸುಮಾರು ವರ್ಷಗಳಿಂದ ಅಂಬಿಗರ ಚೌಡಯ್ಯನ ಜಯಂತಿ, ಅಭಿವೃದ್ಧಿ ನಿಗಮ ಮಾಡಿದೆ‌. ಆದರೆ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಭಾರೀ ನಡೆಯುವ ಬಜೆಟ್ ನಲ್ಲಿ ಆದರೂ ಸರ್ಕಾರ ಅಂಬಿಗರ ಚೌಡಯ್ಯನವರ ಪ್ರಾಧಿಕಾರ ಹಾಗೂ ವಿಶೇಷ ಅನುದಾನ ಮೀಸಲಿಡಬೇಕೆಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಉಮೇಶ್ ಮುದ್ನಾಳ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News