×
Ad

ಯಾದಗಿರಿ | ಫೆ.21ರಂದು ಹೆಡಗಿಮದ್ರಾ ಜಾತ್ರೆ : ರಾಚನಗೌಡ ಮುದ್ನಾಳ

Update: 2025-02-17 16:13 IST

ಯಾದಗಿರಿ : ತಾಲೂಕಿನ ಹೆಡಗಿಮದ್ರಾ ಶಾಂತಶಿವಯೋಗೀಶ್ವರ ಜಾತ್ರೆ ಫೆ.21ರಂದು ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳ ನೆತೃತ್ವದಲ್ಲಿ ಭವ್ಯ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಭಕ್ತರಾದ ರಾಚನಗೌಡ ಮುದ್ನಾಳ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.19ರಿಂದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಫೆ.19ರಂದು ಶ್ರೀಮಠದ ವಿದ್ಯಾ ಸಂಸ್ಥೆಯಾದ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮ, ಫೆ. 20ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಂಜೆ 4 ಗಂಟೆಗೆ ಶ್ರೀಗಳ ಗಂಗಾಸ್ನಾನ ಹೆಡಗಿಮದ್ರಾ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ಶ್ರೀಮಠದ ಪೀಠಾಧಿಪತಿಗಳು ಹಾಗೂ ಭಕ್ತರಿಂದ ತನಾರತಿ ಮಹೋತ್ಸವ ಜರುಗಲಿದೆ, ಫೆ.21ರಂದು ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ 11ಕ್ಕೆ ಗುರುದೀಕ್ಷೆ ನಂತರ ಸಂಜೆ 7 ಗಂಟೆಗೆ ರಥೋತ್ಸವ ನಂತರ ಧರ್ಮ ಸಂಸ್ಕೃತಿ ಉತ್ಸವ ನಂತರ ಖ್ಯಾತ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ, ಫೆ.22ರಂದು ಬೃಹತ್ ಜಾನುವಾರು ಜಾತ್ರೆ ನಂತರ ಭಕ್ತರಿಂದ ದೇಸಿಕ್ರೀಡೆಗಳಾದ ಕೈಕುಸ್ತಿ, ಸಂಗ್ರಾಣಿ ಕಲ್ಲು ಎತ್ತುವುದು, ಉಸುಕಿನ ಚೀಲ ಎತ್ತುವುದು ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಫೆ.21ರಂದು ರಥೋತ್ಸವ ನಂತರ ನಡೆಯುವ ಧಾರ್ಮಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರಾಯಚೂರು ಕಿಲ್ಲಾ ಬ್ರಾಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ದೇವಾಪುರದ ಜಡಿ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಕಲಬುರಗಿಯ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು, ಚನದಾಪುರಿ ಹಿರೇಮಠ ಕಲಬುರ್ಗಿ, ತೊನಸನಳ್ಳಿಯ ರೇವಣಸಿದ್ಧಚರಂತೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಶರಣಗೌಡ ಕಂದಕೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ರಾಚನಗೌಡ ಮುದ್ನಾಳ ಪ್ರಾಸ್ತಾವಿಕ ಮಾತನಾಡಲಿದ್ದು, ಮುಖ್ಯ ಅತಿಥಿಗಳಾಗಿ ಮಹೇಶರಡ್ಡಿಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಚನ್ನಪ್ಪಗೌಡ ಮೊಸಂಬಿ, ಬಸರಡ್ಡಿಗೌಡ ಅನಪೂರ, ಬಸ್ಸುಗೌಡ ಬಿಳ್ತಾರ, ವಿನಾಯಕ ಮಾಲಿಪಾಟೀಲ್, ರಾಮರಡ್ಡಿ ಸಾಹು ತಂಗಡಗಿ, ಚಂದ್ರಾಯಗೌಡ ಗೋಗಿ, ಭೀಮನಗೌಡ ಕ್ಯಾತನಾಳ, ಬಸವರಾಜ ಚಂಡ್ರಿಕೆ, ವೆಂಕಟರೆಡ್ಡಿ ಮಾಪಾಟೀಲ್, ಶಿವಕುಮಾರ, ಮಲ್ಲಣ್ಣಗೌಡ ಹಳಮನಿ ಕೌಳೂರು, ಸುಭಾಷ ಕಟಕಟಿ, , ಕೋಟೇಶ್ವರ ರಾಜ್, ಬಸವಂತರೆಡ್ಡಿ ಕಾರಡ್ಡಿ, ನೀಲಕಂಠ ಶಾಪೂರಕರ್, ರಾಜುಗೌಡ ಚಾಮನಾಳ, ಅನೀಲಕುಮಾರ ತಿಮ್ಮಣ್ಣ ಹೆಡಗಿಮದ್ರಾ ಆಗಮಿಸಲಿದ್ದು, ಅಮರಯ್ಯ ಸ್ವಾಮಿ ಜಾಲಿಬೆಂಜೆ ನಿರೂಪಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದುಗೌಡ ಕಾಮರಡ್ಡಿ,ಸಿದ್ರಾಮರಡ್ಡಿ ಅಣಿಬಿ, ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಭಕ್ತರು ಇದ್ದರು.

ಫೆ.19ರಂದು ಎಸ್.ಎಸ್.ವಿದ್ಯಾಪೀಠದ 9 ವಾರ್ಷಿಕೋತ್ಸವ :

ಫೆ.19ರಂದು ಸಂಜೆ 5 ಗಂಟೆಗೆ ಶ್ರೀಮಠದ ವಿದ್ಯಾ ಸಂಸ್ಥೆಯಾದ ಎಸ್.ಎಸ್.ವಿದ್ಯಾಪೀಠದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಭಗವತ್ಪಾದರು ವಹಿಸಲಿದ್ದು, ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರಡ್ಡಿ ಹಾಗೂ ಲಕ್ಷ್ಮೀ ಅರುಣಾರಡ್ಡಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರಡ್ಡಿಗೌಡ ಮುದ್ನಾಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಶ್ರೀ ವೇ.ಮೂ ಮಹಂತಯ್ಯ ಸ್ವಾಮಿ ಹಿರೇಮಠ ಹೆಡಗಿಮದ್ರಾ, ಖ್ಯಾತ ವೈದ್ಯರಾದ ಡಾ.ಸಿ.ಎಮ್.ಪಾಟೀಲ್, ಬಸವರಾಜ ಪಾಟೀಲ್ ಬಿಳ್ಳಾರ್, ಮೆಹಪೂಜ್ ಆಲಿಖಾನ್, ಶೇಖರಗೌಡ ದಮ್ಮೂರು, ಜಿಲ್ಲಾ ನ್ಯಾಯವಾದಿಗಳ ಸಂಘ ಯಾದಗಿರಿ ಜಿಲ್ಲಾಧ್ಯಕ್ಷರಾದ ಸಿ.ಎಸ್ ಮಾಲಿ ಪಾಟೀಲ್, ಯಾದಗಿರಿ ಆರ್ಯಭಟ್ಟ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ ರೆಡ್ಡಿ ಅನಪೂರ್, ಎಇಇ ಶಿವರಾಜ ಪಾಟೀಲ್, ಚಂದ್ರಲಾಂಭ ದೇವಸ್ಥಾನ ಟ್ರಸ್ಟ್ ಸನ್ನತಿಯ ಮಲ್ಲಿನಾಥಗೌಡ ಮಾಲಿಪಾಟೀಲ್, ಬಸವರಾಜ ಶಿವರಾಯ ಯಲ್ಲೇರಿ, ಚಂದ್ರಪ್ಪ ಗುಂಜನೂರ್, ದೇವಿಂದ್ರಪ್ಪ ಕಲಾಲ್ ಭಾಗವಹಿಸಲಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News