×
Ad

ಯಾದಗಿರಿ | ಮನುಷ್ಯರನ್ನು ಪ್ರೀತಿಸಿ, ಗೌರವಿಸುವುದನ್ನು ಕಲಿಯಬೇಕು : ಮುಹಮ್ಮದ್ ಕುಂಞಿ

Update: 2025-02-10 18:47 IST

ಯಾದಗಿರಿ: ಮಾನವನ ಶರೀರಕ್ಕೆ ರೋಗ ತಗುಲಿದರೆ ಔಷಧಿಗಳು ಇವೆ, ಆದರೆ ಮನಸ್ಸಿನ ರೋಗಕ್ಕೆ ಔಷಧಿ ಇಲ್ಲ. ಈ ಜಗತ್ತಿಗೆ ಬಂದ ಸಂತರು, ಶರಣರು ಜೀವನ ಏನು ಎನ್ನುವುದು ದೇವರು ಹೇಳಿಕೊಟ್ಟಿದ್ದಾರೆ. ನಾವು ಅದನ್ನು ಅರಿತುಕೊಳ್ಳಬೇಕು. ಭೂಮಿ ಮೇಲೆ ಮನುಷ್ಯನ ಪಾತ್ರ ದೇವನ ಪ್ರತಿನಿಧಿ ಅಷ್ಟೆ ಭೂಮಿಯ ಮೇಲೆ ಮನುಷ್ಯ ಒಳ್ಳೆಯ ಜೀವನದ ಜೊತೆಗೆ ಒಳ್ಳೆಯ ಕಾರ್ಯಗಳು ಮಾಡಿದಾಗ ಮಾತ್ರ ಮೋಕ್ಷ ಸಿಗುತ್ತದೆ ಎಂದು ಜನಾಬ್ ಮುಹಮ್ಮದ್ ಕುಂಞಿ ಹೇಳಿದರು.

ನಗರದ ಈಡನ್ ಗಾರ್ಡನ್ ಫಂಕ್ಷನ್ ಹಾಲ್ ಮೈದಾನದಲ್ಲಿ ನಡೆದ ಜಮಾಅತೆ ಇಸ್ಲಾಮಿ ಹಿಂದ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜೀವನದ ಉದ್ದೇಶ ವಿಷಯ ಕುರಿತು ಕನ್ನಡದಲ್ಲಿ ʼಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮʼದಲ್ಲಿ ಮಾತನಾಡಿದ ರಾಜ್ಯದ ಪ್ರಸಿದ್ಧ ಕನ್ನಡ ಪ್ರವಚನಾಕಾರಾದ ಜನಾಬ್ ಮುಹಮ್ಮದ್ ಕುಂಞಿ ಅವರು, ದೇವರು ಬದುಕಲು ಈ ಜಗತ್ತಿನಲ್ಲಿ ಎಲ್ಲಾ ರೀತಿಯ ನಮಗೆ ಬೇಕಾದ ಗಾಳಿ, ನೀರು, ಮುಂತಾದ ವ್ಯವಸ್ಥೆ ಮಾಡಿದ್ಧಾನೆ ಹೀಗಾಗಿ ಮನುಷ್ಯ ದೇವರು ಮೆಚ್ಚುಗೆ ಪಡುವಂತೆ ಬದುಕಬೇಕು ಎಂದರು.

ನಮ್ಮ ಬದುಕು ಅರ್ಥವಾದರೆ ಬದುಕು ಬಹಳಷ್ಟು ಹಗುರವಾಗುತ್ತದೆ, ಅದೇ ಅರ್ಥವಾಗದೇ ಇದ್ದರೆ ಬದುಕು ಬಹಳ ಭಾರವಾಗುತ್ತದೆ. ಮನುಷ್ಯ ಹರಿವಿನಿಂದ ಬದುಕಬೇಕು ಮನುಷ್ಯನಿಂದ ಮನುಷ್ಯನಿಗೆ ಅನ್ಯಾಯ. ದ್ವೇಷ, ಹಿಂಸೆ, ಮೋಸ ಮಾಡಿದ್ದರೆ ಆ ದೇವರು ಮೇಲಿನಿಂದ ನೋಡುತ್ತಾನೆ ಆದರೆ ನಮಗೆ ಅದು ಕಾಣುವುದಿಲ್ಲ ಮನುಷ್ಯರನ್ನು ಪ್ರೀತಿಸಿ ಗೌರವಿಸುವುದು ನಾವು ಕಲಿಯಬೇಕು. ಮಾನವರು ಆದ ನಾವು ಸತ್ಯವನ್ನು ನಮ್ಮ ಜೀವನದ ಗುರಿಯಾಗಿಸಿಕೊಳ್ಳಬೇಕು ಹುಟ್ಟಿದ ಮೇಲೆ ಮಾನವನಿಗೆ ಸಾವು ಇದ್ದೇ ಇರುತ್ತದೆ, ದೇವ ಮೆಚ್ಚುವ ಕೆಲಸ ಮಾಡಿ ಜೀವನ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಈ ಪ್ರವಚನ ಕಾರ್ಯಕ್ರಮದಲ್ಲಿ, ಗುರುಲಿಂಗ ಮಹಾಸ್ವಾಮಿಗಳು, ಜಮಾಅತೆ ಇಸ್ಲಾಮಿ ಹಿಂದ್ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿನ್ಹಾಜುದ್ದೀನ್, ಹುನುಮೇಗೌಡ ಬೀರನಕಲ್, ಶರಣಪ್ಪ ಮಾನ್ಯಗಾರ, ದೇವರಾಜ ನಾಯಕ ಗಡ್ಡೆಸೂಗೂರ್, ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ, ಧಮ್ಮಚಾರಿ ನಿಂಗಪ್ಪ ಕೊಲ್ಲೂರಕರ್, ದಲಿತ ಮುಖಂಡ ಮರೆಪ್ಪ ಚಟ್ಟೇರಕರ್, ಡಾ. ಭಗವಂತ ಅನ್ವಾರ, ಸೋಮಶೇಖರ್ ಮಣ್ಣೂರ್ ವೀರಶೈವ ಲಿಂಗಾಯತ ಮುಖಂಡರು, ಮಲ್ಲಣ್ಣ ದಾಸನಕೇರಿ, ಟಿ.ಎನ್ ಭೀಮುನಾಯಕ, ನಾಗರತ್ನ ಅನಪೂರ, ಸಾನಿ ಅಧ್ಯಕ್ಷ ಗುಲಾಮ್ ಮೈಹಿಬೂಬ್, ಜ. ಅಥರುಲ್ಲಾಹ್ ಶರೀಫ್, ರಾಜ್ಯ ಸಲಹಾ ಸಮಿತಿ ಸದಸ್ಯರು, ಜಮಾತೆ ಇಸ್ಲಾಮಿ ಹಿಂದ್, ಜ. ಗುಲಾಂ ಮೆಹಬೂಬ್, ಸ್ಥಾನೀಯ ಅಧ್ಯಕ್ಷರು, ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News