×
Ad

ಯಾದಗಿರಿ | ಗ್ರಾಮೀಣ ಪ್ರದೇಶದ ಜನರು ಜನಪದ ಸಂಸ್ಕೃತಿಯನ್ನು ಉಳಿಸಲು ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ : ಬಾಬು ತಲಾರಿ

Update: 2025-02-17 19:27 IST

ಯಾದಗಿರಿ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಸ್ವರ ಸಾಮ್ರಾಟ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ(ರಿ.) ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪ ಗುರುಮಿಟಕಲ್ ದಲ್ಲಿ ನಡೆಯಿತು.

ಗುರುಮಿಟಕಲ್ ಪುರಸಭೆ ಸದಸ್ಯರಾದ ಬಾಬು ತಲಾರಿ ತಮಟೆ ಬಾರಿಸುವ ಮೂಲಕ ಉದ್ಘಾಟನೆ ಚಾಲನೆ ನೀಡಲಾಯಿತು. ಗ್ರಾಮೀಣ ಪ್ರದೇಶದ ಜನರು ಜನಪದ ಸಂಸ್ಕೃತಿಯನ್ನು ಉಳಿಸಲು ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಯುವಜನರು ಜನಪದ ಸೊಗಡನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ಸಿಗುವಂತೆ ಮಾಡುವುದರ ಕಡೆ ಗಮನಹರಿಸಬೇಕು ಎಂದು ಬಾಬು ತಲಾರಿ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಶರಣು ಎಸ್ ನಾಟೇಕರ್, ಉಪನ್ಯಾಸಕರು ಡಾ.ಬಾಲಪ್ಪ ಕಟ್ಲಗೇರಿ, ಶಿವಶರಣಪ್ಪ ವಾಡಿ, ಕಾಶಿನಾಥ ಶೆಳ್ಳಿಗಿ, ಅಡಿವೇಪ್ಪ ತಳವಾರ ನ್ಯಾಯವಾದಿಗಳು, ಮಾತಯ್ಯಸ್ವಾಮಿ ಖಾನಾಪುರ, ಸಾಬ್ಲು ತಲಾರಿ, ಸಾಬು ಬೇಗರ್, ಈ ಸಂದರ್ಭದಲ್ಲಿ ಇನ್ನಿತರರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News