×
Ad

ಯಾದಗಿರಿ ಜಿಲ್ಲಾ ಕೋರ್ಟ್‌ಗೆ ಬಾಂಬ್ ಬೆದರಿಕೆ

Update: 2026-07-02 15:15 IST

ಯಾದಗಿರಿ : ಇಲ್ಲಿನ ಮುದ್ನಾಳ್ ಕ್ರಾಸ್ ಹತ್ತಿರವಿರುವ ಜಿಲ್ಲಾ ಕೋರ್ಟ್ ಗೆ ಗುರುವಾರ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದೆ. ಇದು ತಿಳಿದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಕೋರ್ಟ್ ಹಾಲ್ ನಿಂದ ಹೊರಗೆ ಬಂದಿದ್ದಾರೆ.

ವಿಷಯ ತಿಳಿದು ಬಾಂಬ್ ಪತ್ತೆದಳ, ಶ್ವಾನ ತಂಡ ಭೇಟಿ ನೀಡಿ ಇಡೀ ಕೋರ್ಟ್ ನ ವಿವಿಧ ಸ್ಥಳಗಳನ್ನು ಪರಿಶೀಲನೆ ಮಾಡಿದ್ದಾರೆ.

ʼಇಂದು ಮಧ್ಯಾಹ್ನ 1:20 ರಿಂದ 3 ಗಂಟೆಯ ನಡುವೆ ನಿಮ್ಮ ನ್ಯಾಯಾಲಯದಲ್ಲಿ 13 ವಿಷ ಅನಿಲ + RDX ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ನ್ಯಾಯಾಧೀಶರನ್ನು/ಮುಗ್ಧ ಸಾರ್ವಜನಿಕರನ್ನು ಸ್ಥಳಾಂತರಿಸಿ!ʼ ಎಂದು ಮೇಲ್ ನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News