×
Ad

ಯಾದಗಿರಿ | ಅವ್ಯವಹಾರ ಆರೋಪ : ಪಿಡಿಓರನ್ನು ಸೇವೆಯಿಂದ ವಜಾಗೊಳಿಸಿ ಸೂಕ್ತ ಕ್ರಮಕ್ಕೆ ದಲಿತ ಸೇನೆ ಆಗ್ರಹ

Update: 2025-05-26 19:59 IST

ಯಾದಗಿರಿ: ಜಿಲ್ಲೆಯ ಶಹಾಪೂರ ತಾಲೂಕಿನ ಉಕ್ತಿನಾಳ ಗ್ರಾಮ ಪಂಚಾಯತ್‌ನಲ್ಲಿ 2022 ರಿಂದ 25ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯಡಿ ಹಾಗೂ ನರೇಗಾ ಯೋಜನೆಯಡಿ ಸರ್ಕಾರದ ಆದೇಶ/ಸುತ್ತೋಲೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಹಲವು ಅಕ್ರಮಗಳನ್ನು ನಡೆಸಿ 4 ಕೋಟಿ ರೂ. ಗೂ ಅಧಿಕ ಅವ್ಯವಹಾರ ಮಾಡಿದ್ದಾರೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಆರೋಪಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ದೊಡ್ಡ ಅಕ್ರಮಗಳು ನಡೆಯುತ್ತಿವೆ. ರಾಜ್ಯದಲ್ಲಿ ಅಭಿವೃದ್ಧಿ ಕಡಿಮೆಯಾಗಿದೆ. ಭ್ರಷ್ಟಾಚಾರ ಹೆಚ್ಚಾಗಿ ಮತ್ತು ದಲಿತರಿಗೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಪ್ರಭಾವಿ ದಲಿತ ನಾಯಕ ಪ್ರಿಯಾಂಕ್‌ ಖರ್ಗೆಯವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಸಚಿವರಿದ್ದಾರೆ. ಆದರೂ ಕೂಡ ಬಹಳಷ್ಟು ಗ್ರಾಮೀಣ ಪ್ರದೇಶದ ದಲಿತರ ಕಾಲೋನಿಗಳಲ್ಲಿ ಸರಿಯಾದ ರಸ್ತೆಗಳಿಲ್ಲ, ಶುದ್ಧ ಕುಡಿಯಲು ನೀರಿಲ್ಲ, ವಿದ್ಯುತ್ ಕಂಬಗಳು ಇಲ್ಲ, ಬಡ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ ಯಾಕೆ.? ಅವರು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಸುತ್ತೋಲೆಗಳು/ಆದೇಶಗಳು, ಎಸ್ಸಿ, ಎಸ್ಟಿ ಅನುದಾನ ದುರುಪಯೋಗ, ಅಂಗವಿಕಲರ ಅನುದಾನ ದುರುಪಯೋಗ ಶೇ.25ರಷ್ಟು ಸಾಮಗ್ರಿಗಳನ್ನು ಎಸ್.ಸಿ/ಎಸ್.ಟಿ ಸೇವಾ ಪ್ರವರ್ತಕರಿಂದ ಖರೀದಿಸದೆ ಈ ನಿಯಮಗಳನ್ನು ಗಾಳಿಗೆ ತೂರಿ ವಿವಿಧ ಸಾಮಗ್ರಿ ಖರೀದಿಸಿ ಭಾರಿ ಪ್ರಮಾಣ ಅವ್ಯವಹಾರ ಮಾಡಿದ ಉಕ್ಕಿನಾಳ ಗ್ರಾಮ ಪಂಚಾಯತನ ಪಿಡಿಓ ರಮೇಶ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆ ವಿಧಿಸಬೇಕು. ಒಂದು ವೇಳೆ ಈ ಅಕ್ರಮ ತನಿಖೆ ಮಾಡಲು ವಿಳಂಬ ಮಾಡಿದರೆ ಲೋಕಾಯುಕ್ತರಿಗೆ ದೂರ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಅಶೋಕ ಹೊಸಮನಿ, ಉಕ್ಕಿನಾಳ ಗ್ರಾಮ ಪಂಚಾಯತಿ ಸದಸ್ಯ ಶಾಂತಪ್ಪ ಬಿ ಸಾಲಿಮನಿ, ಪ್ರಧಾನ ಕಾರ್ಯದರ್ಶಿ ಸಂತೋಷ ಬಿ. ಪಾಳಾ, ಉದಯ ಕೀಣಿಗಿ, ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News