ಯಾದಗಿರಿ | ಜಾತಿ ಗಣತಿ ಸಮೀಕ್ಷಾ ಸ್ಥಳಕ್ಕೆ ಡಿಸಿ ಡಾ.ಸುಶೀಲಾ ಬಿ. ಭೇಟಿ, ಪರಿಶೀಲನೆ
Update: 2025-05-16 19:49 IST
ಯಾದಗಿರಿ: ಕಳೆದ ಮೇ 5 ರಂದು ಆರಂಭವಾಗಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಶುಕ್ರವಾರ ನಗರದ ಗಾಂಧಿ ನಗರ ತಾಂಡಾ, ಅಂಬೇಡ್ಕರ್ ನಗರ, ಕೋಟಗೇರಾ ವಾಡಾಕ್ಕೆ ಭೇಟಿ ನೀಡಿದರು.
ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ನಡೆದಿರುವ ಈ ಸಮೀಕ್ಷೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ನಿರಂತರ ಮಾಹಿತಿ ಪಡೆಯುತ್ತಿರುವ ಡಿಸಿ ಅವರು, ಸಮೀಕ್ಷಾ ಸ್ಥಳಕ್ಕೆ ತಾವೇ ಖುದ್ದು ಭೇಟಿ ನೀಡುವ ಮೂಲಕ ಸಮೀಕ್ಷೆಯಲ್ಲಿರುವ ಸಿಬ್ಬಂದಿ ಮತ್ತು ಜನರಿಗೆ ಅಗತ್ಯ ಹೆಚ್ಚಿನ ಮಾಹಿತಿ ನೀಡಿದರು.
ಈ ವೇಳೆ ಗಾಂಧಿ ನಗರದಲ್ಲಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ತಾಲೂಕು ದಂಡಾಧಿಕಾರಿ ಸುರೇಶ ಅಂಕಲಗಿ, ಬಿಇಓ ಸೇರಿದಂತೆ ಇತರರಿದ್ದರು.