ಯಾದಗಿರಿ: ಉಪ್ಪಾರ ಸಮಾಜದಿಂದ ಹೋರಾಟಗಾರರಿಗೆ ಸನ್ಮಾನ
ಯಾದಗಿರಿ: ಉಪ್ಪಾರ ಸಮಾಜದ ವತಿಯಿಂದ ಕನ್ನಡ ನಾಡು ನುಡಿ ನೆಲ ಜಲ ಸಂರ‍್ಷಣೆಗಾಗಿ ಹೋರಾಟದಲ್ಲಿ ತೊಡಿಗಿಸಿಕೊಂಡ ಮುಖಂಡರಿಗೆ ಸನ್ಮಾನ ಸಮಾರಂಭ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ರಾಜಕುಮಾರ ಹೊರಮನಿ ಖಾನಾಪೂರ, ಜಿಲ್ಲಾಧ್ಯಕ್ಷ ನಾಗಪ್ಪ ಹೊನಗೇರಾ ಇವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗಪ್ಪ ಹೊನಗೇರಾ, ಕನ್ನಡ ನಾಡುನುಡಿ ರಕ್ಷಣೆಗಾಗಿ ಹೋರಾಟಕ್ಕೆ ಸೇರಿದ ನನಗೆ ಗುರುತಿಸಿ ಸನ್ಮಾನಿಸಿರುವುದು ಜವಬ್ದಾರಿ ಹೆಚ್ಚಿಸಿದೆ. ಸಮಾಜಕ್ಕೆ ಋಣಿಯಾಗಿದ್ದೇನೆ. ಹಾಗೆಯೇ ನಾಡುನುಡಿ ನೆಲ ಜಲ, ಜನ ಸಮಸ್ಯೆಯ ಸಂದರ್ಭದಲ್ಲಿ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು, ವೇದಿಕೆ ಮೇಲೆ ಸಮಾಜದ ಉಪಾಧ್ಯಕ್ಷ ಸುಭಾಶ್ಚಂದ್ರ ಕೋಟಗೇರಾ, ರಾಜೀವಗಾಂದಿ ನಗರ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಆರ್.ಎಸ್. ಹನುಮಂತ,
ಉಪ್ಪಾರ ನೌಕರರ ಸಂಘದ ಜಿಲ್ಲಾದ್ಯಕ್ಷ ವಿಶ್ವನಾಥ ಗುಡೂರ, ಶಿವರಾಜ ಗುತ್ತೇದಾರ, ಖಾನಾಪೂರ ಗ್ರಾಪಂ ಸದಸ್ಯ ಮರಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ನ್ಯಾಯವಾದಿ ದೇವೀಂದ್ರಪ್ಪ ಯರಗೋಳ, ಭೀಮರಾಯ ರಾಯಪ್ಪನೋರ್ ಹತ್ತಿಕುಣಿ, ದಶರಥ ಶೆಟ್ಟಿಗೇರಾ, ರಮೇಶ ಮೋಟ್ನಳ್ಳಿ ಸೇರಿದಂತೆ ಅನೇಕರು ಇದ್ದರು.