×
Ad

ಯಾದಗಿರಿ | ಎನ್.ರವಿಕುಮಾರ್ ವಿರುದ್ಧದ ಪ್ರಕರಣದ ರದ್ದಿಗೆ ಲಲಿತಾ ಅನಪುರ ಆಗ್ರಹ

Update: 2025-05-28 16:41 IST

ಯಾದಗಿರಿ : ಕಲಬುರಗಿಯಲ್ಲಿ ಇತ್ತಿಚೆಗೆ ಪ್ರತಿಭಟನಾ ರ್‍ಯಾಲಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಸರ್ಕಾರವನ್ನು ಟೀಕಿಸಿದ್ದಕ್ಕೆ ಸರ್ಕಾರದ ಒತ್ತಡದಿಂದ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದನ್ನು, ಕೂಡಲೇ ರದ್ದು ಪಡಿಸಬೇಕೆಂದು ನಗರಸಭೆಯ ಅಧ್ಯಕ್ಷೆ ಲಲಿತಾ ಅನಪುರ ಆಗ್ರಹಿಸಿದ್ದಾರೆ.

ಸರ್ಕಾರದ ವೈಫಲ್ಯವನ್ನು ಖಂಡಿಸುವುದು, ಟೀಕಿಸುವುದು ಜವಾಬ್ದಾರಿಯುತ ಪ್ರತಿಪಕ್ಷದವರು ಕರ್ತವ್ಯ. ಆಡಳಿತ ವೈಫಲ್ಯವನ್ನು ಪ್ರಶ್ನಿಸಿರುವ ರವಿಕುಮಾರ್ ವಿರುದ್ಧ ಉದ್ದೇಶಪೂರ್ವಕವಾಗಿ ರಾಜಕೀಯ ಪ್ರಭಾವದಿಂದ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ಕೂಡಲೇ ಕೇಸ್ ವಜಾ ಮಾಡಬೇಕೆಂದುಲಲಿತಾ ಅನಪುರ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News