×
Ad

ಯಾದಗಿರಿ | ಡೆಂಗ್ಯೂ ರೋಗ ತಡೆಗೆ ಸ್ವಚ್ಛತೆ ಕಾಪಾಡಿ ಮುನ್ನೆಚ್ಚರಿಕೆ ವಹಿಸಿ : ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ

Update: 2025-05-20 20:18 IST

ಯಾದಗಿರಿ : ಜಿಲ್ಲೆಯಲ್ಲಿನ ಸಮಸ್ಯಾತ್ಮಕ ಡೆಂಗ್ಯೂ ಪ್ರದೇಶಗಳನ್ನು ಗುರುತಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಡೆಂಗ್ಯೂ ಜ್ವರವು ಅಧಿಸೂಚಿತ ರೋಗಗಳ ವ್ಯಾಪ್ತಿಗೆ ಒಳಪಡುವುದರಿಂದ ಎಲ್ಲ ಖಾಸಗಿ ಆಸ್ಪತ್ರೆಗಳು, ಇನ್ನಿತರ ಖಾಸಗಿ ಕ್ಲಿನಿಕ್‌, ನರ್ಸೀಂಗ್ ಹೋಮ್ ಗಳು ತಮ್ಮಲ್ಲಿ ವರದಿಯಾಗಿರುವ ಡೆಂಗ್ಯೂ ಪ್ರಕರಣಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಸೂಚಿಸಿದರು.

ಖಚಿತ ಡೆಂಗ್ಯೂ ಪ್ರಕರಣಗಳು ವರದಿಯಾದ ಪಕ್ಷದಲ್ಲಿ ನ್ಯಾಶನಲ್ ಡ್ರಗ್ ಪಾಲಿಸಿ ಆನ್ ಡೆಂಗ್ಯೂ ಅನುಸಾರವೇ ಚಿಕಿತ್ಸೆ ನೀಡಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಕೆಪಿಎಮ್ಇ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮಕ್ಕೆ ಅವಕಾಶವಿರುತ್ತದೆ ಎಂದು ಹೇಳಿದರು.

ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸಾಜಿದ್ ಅವರು ಮಾತನಾಡಿ, 2025 ರಲ್ಲಿ ಈವರೆಗೆ 778 ಡೆಂಗ್ಯೂ ಪ್ರಕರಣಗಳ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 13 ಪ್ರಕರಣಗಳು ಮಾತ್ರ ಧೃಡಪಟ್ಟಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಿಮ್ಸ್ ಡೀನ್ ಡಾ.ಸಂದೀಪ್ ಹರ್ಷಣಗಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ರಿಜ್ವಾನಾ ಆಫ್ರೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಡಾ.ಮಹೇಶ್ ಬಿರಾದರ್, ಡಾ.ಪದ್ಮಾನಂದ ಗಾಯಕ್ವಾಡ್ ಮಾನಸಿಕ ಆರೋಗ್ಯ ಅಧಿಕಾರಿಗಳು, ಮನೋವೈದ್ಯರು ಡಾ.ಅಮಿತ್ ಕುಮಾರ್, ಆಲದಮರ ಫೌಂಡೇಶನ್ ನ ಫಿರೋಜ್ ಸೈಯದ್ ಮುಹಮ್ಮದ್,ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಮ್.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News