ಯಾದಗಿರಿ | ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ನಗರದ ವಿವಿಧೆಡೆ 10.60 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ, ರಸ್ತೆ ವಿಭಜಕ(ಡಿವೈಡರ್) ನಿರ್ಮಾಣ ಮತ್ತು ರಾಜಕಾಲುವೆ ಕಾಮಗಾರಿಯನ್ನು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ವೀಕ್ಷಿಸಿದರು.
ನಗರದ ಬಸವೇಶ್ವರ ಗಂಜ್ ವೃತ್ತ, ಗಾಂಧಿ ವೃತ್ತ, ಹತ್ತಿಕುಣಿ ರೋಡ್, ಬಾಲಾಜಿ ದೇವಸ್ಥಾನ ರೋಡ್ ಅಭಿವೃದ್ಧಿ ಮತ್ತು ಡಿವೈಡ್ ಕಾಮಗಾರಿ ವೀಕ್ಷಿಸಿದ ಶಾಸಕರು ನಿಗಧಿತ ಕಾಲಾವಕಾಶದಲ್ಲಿ ಗುಣಮಟ್ಟದ ಕಾಮಗಾರಿ ಆಗಬೇಕು. ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲಾ, ಕಳಪೆ ಆಗಿರುವ ಕುರಿತು ದೂರು ಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭೂಸೇನಾ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಯೋಜನೆಯಡಿ 10.60 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರಮುಖ ರಸ್ತೆಗಳ ಅಭಿವೃದ್ಧಿ, ಡಿವೈಡರ್ ಹಾಗೂ ಚರಂಡಿ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಂದರ ನಗರ ಮಾಡುವುದು ನನ್ನ ಸಂಕಲ್ಪವಾಗಿದೆ ಹಾಗಾಗಿ ಕೆಕೆಆರ್‌ಡಿಬಿ ಮೈಕ್ರೊ, ಸಿಎಂಡಿಕ್ಯೂ ಯೊಜನೆಯಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಪ್ರಮುಖವಾಗಿ 50 ಲಕ್ಷ ರೂ. ವೆಚ್ಚದಲ್ಲಿ ಗಾಂಧೀ ವೃತ್ತದಲ್ಲಿ ರಾಜಕಾಲುವೆ ನಿರ್ಮಾಣ, 1.10 ಕೋಟಿ ರೂ. ವೆಚ್ಚದಲ್ಲಿ ನೇತಾಜಿ ವೃತ್ತದಿಂದ ಶಾಸ್ತ್ರೀ ವೃತ್ತ, ಶಾಸ್ತ್ರೀ ವೃತ್ತದಿಂದ ಸ್ಟೇಷನ್ ರಸ್ತೆ, ನೇತಾಜಿ ವೃತ್ತದಿಂದ ಆರ್‌ಟಿಒ ಕಚೇರಿಯ ವರೆಗೆ ಸೂಕ್ ಸ್ಟೋನ್ ಡಿವೈಡರ್, 1.88 ಲಕ್ಷ ರೂ. ವೆಚ್ಚದಲ್ಲಿ ಬಾಲಾಜಿ ದೇವಸ್ಥಾನ ದಿಂದ ಡಿಗ್ರಿ ಕಾಲೇಜುವರೆಗೆ, ಹತ್ತಿಕುಣಿ ಕ್ರಾಸ್ ದಿಂದ ನಗರಸಭೆವರೆಗೆ, ಶಾಸ್ತ್ರೀವೃತ್ತ ದಿಂದ ಹೋಲಸ್ಟನ್ ಆಸ್ಪತ್ರೆಯ ವರೆಗಿನ ರಸ್ತೆಗೆ ಡಿವೈಡರ್ ಕಾಮಗಾರಿ, 1.52 ಕೋಟಿ ರೂ. ವೆಚ್ಚದಲ್ಲಿ ಮೈಲಾಪುರ ಬೇಸ್ ದಿಂದ ಗಾಂಧೀ ವೃತ್ತದ ವರೆಗೆ, ಹೋಲಸ್ಟನ್ ಆಸ್ಪತ್ರೆ ಯಿಂದ ಗಂಜ್ ವರೆಗೆ ರಸ್ತೆ ಡಿವೈಡರ್ ಕೆಲಸ, 60 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ ನಂ.1, ವಾರ್ಡ್ ನಂ.22 ರಲ್ಲಿ ಇಂಟರ್ ಲಾಕ್ ನೆಲಹಾಸು ಕೆಲಸ ಪ್ರಗತಿಯಲ್ಲಿದೆ ಎಂದರು.
ಸಿಎಂಡಿಕ್ಯೂ ಯೊಜನೆಯಡಿ 2.40 ಕೋಟಿ ರೂ. ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಡಿವೈಡರ್ ಮಧ್ಯದಲ್ಲಿ ವಿದ್ಯತ್ ಕಂಬಳಿಗೆ ಪೇಂಟಿಂಗ್, ಎಲ್‌ಇಡಿ ಮತ್ತು ಸ್ಟ್ರಿಪ್ ಲೈಟ್‌ಗಳ ಅಳವಡಿಸಲಾಗಿದೆ. ಬಸವೇಶ್ವರ ಗಂಜ್ ದಿಂದ ಆತ್ಮಲಿಂಗ ದೇವಸ್ಥಾನದ ವರೆಗೆ, ಮೈಲಾಪುರ ಬೇಸ್ ದಿಂದ ತಪ್ಪಡಗೇರಾ ಬಡಾವಣೆವರೆಗೆ, ಸಾಮಿಲ್ ತಿಂದ ಆತ್ಮಲಿಂಗ ದೇವಸ್ಥಾನದ ವರೆಗೆ ಸಿಸಿ ರಸ್ತೆ ಕಾಮಗಾರಿ, 1.36 ಕೋಟಿ ರೂ. ವೆಚ್ಚದಲ್ಲಿ ಆರ್.ವಿ.ಶಾಲೆ ಯಿಂದ ಮುಖ್ಯ ರಸ್ತೆಯ ವರೆಗೆ ಸಿಸಿ ರಸ್ತೆ ಮತ್ತು ರಾಜ ಕಾಲುವೆ ನಿರ್ಮಾಣ ಕಾಮಗಾರಿ ಗಳು ಪ್ರಗತಿಯಲ್ಲಿದ್ದು, ಯುದ್ದೋಪಾದಿಯಲ್ಲಿ ಕೆಲಸ ಮುಗಿಸಲು ಸೂಚಿಸಿದ್ದೇನೆ ಎಂದು ಶಾಸಕ ತುನ್ನೂರು ತಿಳಿಸಿದರು.
ಈ ಸಂದರ್ಭದಲ್ಲಿ ಯುಡಾ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ನಗರಸಭೆ ಸದಸ್ಯರಾದ ವೆಂಕಟರೆಡ್ಡಿ ವನಕೇರಿ, ಹನುಮಂತ ನಾಯಕ್, ಸುರೇಶ ಮಡ್ಡಿ, ಚನ್ನಕೇಶವ ಬಾಣತಿಹಾಳ, ಭೂಸೇನಾ ನಿಗಮದ ಎಇಇ ಶಿವರಾಜ ಕುಮಾರ,ಶಂಕರ ಗೌಡ ಎಇ, ಹೋನಪ್ಪ ಎಇ, ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ, ನಗರಸಬೆ ಎಇಇ ರಜನಿಕಾಂತ ಶೃಂಗೇರಿ, ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಲಚಮರೆಡ್ಡಿ, ಮಹ್ಮದ ಕಲೀಲ್, ನರಸಪ್ಪ ಬಾಗ್ಲಿ, ಕಲೀಮ್ ಜೈನಾ, ಯಾಕೂಬ್, ಸಲೀಮ್ ಹುಂಡೇಕರ್, ಸಾಬಣ್ಣ ಬಾಡಿಯಾಳ, ಮಲ್ಲಯ್ಯ ಕಸಬಿ, ಪ್ರಭಾಗರ ಜಿ. ಕೃಷ್ಣಾ ದಾಸನಕೇರಿ ಇನ್ನಿತರರಿದ್ದರು.