ಯಾದಗಿರಿ | ಶರಣ ಸಾಹಿತ್ಯ ಎಲ್ಲರ ಬದುಕು ಬದಲಾಯಿಸುವ ಸಾಹಿತ್ಯ-ಅಪ್ಪಾರಾವ್ ಅಕ್ಕೋಣಿ
ಸುರಪುರ : ಶರಣ ಎನ್ನುವುದು ಬಸವಾದಿ ಶರಣರಿಂದ ರಚಿಸಲ್ಪಟ್ಟಿರುವ ವಚನ ಸಾಹಿತ್ಯವಾಗಿದೆ. ವಚನಗಳು ಪ್ರತಿಯೊಬ್ಬರ ಬದುಕನ್ನು ಬದಲಾಯಿಸುವ ಸಾಹಿತ್ಯವಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಉಪಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ತಿಳಿಸಿದರು.
ನಗರದ ರಂಗಂಪೇಟೆಯ ಬಸವಪ್ರಭು ಕೇಂದ್ರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಕದಳಿ ಮಹಿಳಾ ಘಟಕದ ಉದ್ಘಾಟನೆ ಹಾಗೂ ಮಹಿಳಾ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಶರಣ ಸಾಹಿತ್ಯ ಅಗತ್ಯವಾಗಿದೆ. ಮಹಿಳೆಯರು ಇಂದು ತಾವೆಲ್ಲರು ಶರಣ ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುವಂತೆ, ಸದಾಕಾಲ ತಮ್ಮ ನೆರವಿಗೆ ಇರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲ ಕದಳಿ ಮಹಿಳಾ ವೇದಿಕೆಯ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ,ಉಪನ್ಯಾಸಕ ಅಬ್ದುಲ್ ಕರೀಂ ಕನ್ಯೆಕೊಳೂರ, ತಾಲೂಕ ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್, ಶಿವಶರಣಪ್ಪ ಹೆಡಗಿನಾಳ, ಜಗದೀಶ ಪಾಟೀಲ್,ಸೋಮರಾಯ ಶಖಾಪುರ, ಅಮರೇಶ ಕುಂಬಾರ ಉಪಸ್ಥಿತರಿದ್ದರು.ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಯುವ ಘಟಕದ ಸಂಚಾಲಕ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು,ಸಿದ್ದಣಗೌಡ ಹೆಬ್ಬಾಳ ಸ್ವಾಗತಿಸಿದರು,ಶರಣಗೌಡ ಪಾಟೀಲ್ ಜೈನಾಪುರ ವಂದಿಸಿದರು.
ರವಿಗೌಡ ಹೆಮನೂರ, ದೇವಿಂದ್ರ ಕರಡಕಲ್, ಶ್ರೀಕಾಂತ ರತ್ತಾಳ, ಅಪ್ಪು ಕಮತಗಿ ಸೂಗೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ಘಟಕ :
ನೀಲಾಂಬಿಕಾ ಪಾಟೀಲ್ ಅದ್ಯಕ್ಷೆ, ಶಾಂತಾ ಅಪ್ಪಾಗೋಳ, ಸವಿತಾ ಪಾಲ್ಕಿ ಉಪಾಧ್ಯಕ್ಷರು, ಮಮತಾ ಪುರಾಣಿಕಮಠ ಪ್ರ.ಕಾರ್ಯದರ್ಶಿ, ಸುನಿತಾ ಎಸ್.ದೇವಾಪುರ ಕೋಶಾಧ್ಯಕ್ಷರು, ಮೇಘಾ ದಾಯಪುಲೆ, ಅರುಣಾ ಎಸ್. ಉಳ್ಳಿ ಸಂ ಕಾರ್ಯದರ್ಶಿಗಳು, ರೇಣುಕಾ ಎಂ. ಗೌಡಗೇರಾ, ಹೇಮಾವತಿ ಬಿ.ಪಾಟೀಲ್ ಕಾರ್ಯದರ್ಶಿಗಳು, ನಿರ್ಮಲಾ ಎಸ್.ವಾರದ್, ಮತ್ತಮ್ಮ ಎ. ಅಕ್ಕಿ,ಶಂಕ್ರಮ್ಮ ವಿ.ಸತ್ಯಂಪೇಟೆ, ಲಕ್ಷ್ಮೀ ಎ.ಕುಂಬಾರ, ಸುಮಂಗಲಾ ವಿ.ರಂಗಂಪೇಟ, ಶೋಭಾ ಎ.ಸಜ್ಜನ್,ಶಾಮಲಾ ಎಸ್.ಪಾಟೀಲ್, ಮಹಾಂತೇಶ್ವರಿ ಎಸ್.ಜೈನಾಪುರ, ನೀಲಮ್ಮ ಆರ್.ಕುಂಬಾರ, ಶಶಿಕಲಾ ಬಿ.ಮಾಲಿ ಪಾಟೀಲ್, ವಿದ್ಯಾವತಿ ವಿ.ಅಂಗಡಿ, ಚನ್ನಮ್ಮ ಪಿ.ಅಂಗಡಿ, ಶರಣಮ್ಮ ವಿ.ಸಜ್ಜನ್ ಕಾರ್ಯಕಾರಿಣಿ ಸಮಿತಿ ಸದಸ್ಯರು ಇದ್ದರು.