ಯಾದಗಿರಿ | ನೀರಿನಲ್ಲಿ ಮುಳುಗಿ ಬಾಲಕಿಯರಿಬ್ಬರು ಮೃತ್ಯು : ಪರಿಹಾರಕ್ಕೆ ಕರವೇ ಮನವಿ
ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ಇಬ್ಬರು ಬಾಲಕಿಯರು ಬಟ್ಟೆ ಒಗೆಯಲು ಹೋಗಿ ಬಾವಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಮೃತ ಬಾಲಕಿಯರ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ ಪರಿಹಾರ ಧನ ನೀಡುವಂತೆ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕರವೇ ಜಿಲ್ಲಾಧ್ಯಕ್ಷ ನಾಗಪ್ಪ ಹೊನಗೇರಾ ಮಾತನಾಡಿ, ಮೃತ ಬಾಲಕಿಯರು ಹಿಂದುಳಿದ ಉಪ್ಪಾರ ಜಾತಿಗೆ ಸೇರಿದ್ದು, ಮೇ 15ರಂದು ಮೋಟ್ನಳ್ಳಿ ಗ್ರಾಮದಲ್ಲಿ ವಿದ್ಯುತ್ ಇಲ್ಲದೇ ಇರುವುದರಿಂದ ಎರಡು ದಿನದಿಂದ ನೀರು ಬರದ ಕಾರಣ ಬಟ್ಟೆ ಒಗೆಯಲು ಊರಿನ ಬಾವಿಗೆ ಹೋದ ಬಾಲಕಿಯರಾದ ವಸಂತಮ್ಮ ಹಾಗೂ ಇವರ ಸಂಬಂಧಿ ನವಿತಾ ಬಟ್ಟೆ ಒಗೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ಒದಗಿಸಿಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆನಂದ ಬಂದಳ್ಳಿ ಹೊನಗೇರಾ, ರಮೇಶ ಮೋಟ್ನಳ್ಳಿ, ಅಲ್ಲಾವುದ್ದಿನ್ ಮೊಟ್ನಳ್ಳಿ, ಮಲ್ಲಪ್ಪ ಗಂಗಾನಗರ, ಲಕ್ಷö್ಮಣ ಮೊಟ್ನಳ್ಳಿ, ಆದಪ್ಪ ಹೊನಗೇರಿ, ಬಸವರಾಜ ಹೊನಗೇರಿ, ರಾಮಣ್ಣ ಹೊನಗೇರಿ, ನಾಗಪ್ಪ ಮೋಟ್ನಳ್ಳಿ, ಅಶೋಕ ಮೋಟ್ನಳ್ಳಿ, ಮಹಾದೇವ ಮೋಟ್ನಳ್ಳಿ, ಶರಣು ಮೋಟ್ನಳ್ಳಿ ಸೇರಿದಂತೆ ಅನೇಕರು ಇದ್ದರು.