ಗಲ್ಫ್ ಕನ್ನಡಿಗರಿಗೆ ಸದಾ ಸಹಕರಿಸುವ ವಾರ್ತಾ ಭಾರತಿ: ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
► ವಾರ್ತಾಭಾರತಿಗೆ 24ರ ಸಂಭ್ರಮ
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ವಾರ್ತಾ ಭಾರತಿ ಯಾವತ್ತಿಗೂ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಧ್ವನಿಯಾಗಿ ನಮ್ಮೊಂದಿಗೆ ಬೆಂಬಲವಾಗಿ ನಿಂತಿದೆ. ಮೊದಲಿನಿಂದಲೂ ಕನ್ನಡಿಗರ ಹಾಗೂ ಕರಾವಳಿಗರ ಆಗುಹೋಗುಗಳು, ಗಲ್ಫ್ ರಾಷ್ಟ್ರಗಳಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವಲ್ಲಿ ವಾರ್ತಾ ಭಾರತಿಯ ಪಾತ್ರ ಅಮೂಲ್ಯವಾಗಿದೆ.
ಯುಎಇ ಸೇರಿದಂತೆ ವಿವಿಧ ದೇಶಗಳ ಕರ್ನಾಟಕ ಎನ್‌ಆರ್‌ಐ ತಂಡಗಳು ಬೆಳಗಾವಿ ಅಧಿವೇಶನಕ್ಕೆ ತೆರಳಿ ಎನ್‌ಆರ್‌ಐ ಸಚಿವಾಲಯದ ಬೇಡಿಕೆ ಮುಂದಿಟ್ಟಾಗ, ಈ ವಿಚಾರವನ್ನು ಆರಂಭದಿಂದಲೂ ನಿರಂತರವಾಗಿ ಪ್ರಸಾರ ಮಾಡಿ ಕರ್ನಾಟಕದ ಹಾಗೂ ಹೊರನಾಡಿನ ಕನ್ನಡಿಗರಿಗೆ ತಲುಪಿಸುವಲ್ಲಿ ವಾರ್ತಾ ಭಾರತಿ ಪ್ರಮುಖ ಪಾತ್ರ ವಹಿಸಿದೆ.
ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಎನ್‌ಆರ್‌ಐ ಸಚಿವಾಲಯದ ಕುರಿತು ಚರ್ಚಿಸಿದ ಸಂದರ್ಭದಲ್ಲಿಯೂ, ನಮ್ಮೊಂದಿಗೆ ಇದ್ದು ಈ ಎಲ್ಲಾ ಮಾಹಿತಿಗಳನ್ನು ಕರ್ನಾಟಕದಾದ್ಯಂತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತಲುಪಿಸುವ ಕಾರ್ಯವನ್ನು ವಾರ್ತಾ ಭಾರತಿ ಮಾಡಿದೆ. ಇದನ್ನು ನಾವು ಎಂದಿಗೂ ಮರೆಯುವುದಿಲ್ಲ. ಎನ್‌ಆರ್‌ಐ ಸಚಿವಾಲಯ ಸ್ಥಾಪನೆಯಾಗಬೇಕು ಎಂಬ ನಮ್ಮ ಬೇಡಿಕೆಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈವಾಗಲೇ ಭರವಸೆ ನೀಡಿದ್ದಾರೆ. ಈ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಆ ದಿನಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ ಹಾಗೂ ಈ ಕಾರ್ಯ ಸಂಪೂರ್ಣಗೊಳ್ಳಲು ನಿಮ್ಮ ಪತ್ರಿಕೆಯ ಸಹಕಾರದ ಅಗತ್ಯವಿದೆ.
ಯುಎಇ ಎನ್‌ಆರ್‌ಐ ಫೋರಂ ಅಧ್ಯಕ್ಷನಾಗಿ, ಎಲ್ಲಾ ಯುಎಇ ಕನ್ನಡಿಗರ ಪರವಾಗಿ ಹಾಗೂ ವೈಯಕ್ತಿಕವಾಗಿ, ವಾರ್ತಾ ಭಾರತಿಯ 24 ವರ್ಷಗಳ ಯಶಸ್ವಿ ಪಯಣಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ಕನ್ನಡಿಗರ ಪರ ಇದೇ ರೀತಿಯ ಸೇವೆ ಮುಂದುವರಿಯಲಿ ಎಂದು ಹಾರೈಸುತ್ತೇನೆ.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ
ಅಧ್ಯಕ್ಷರು – ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್
ಅಧ್ಯಕ್ಷರು – ಕೆಎನ್‌ಆರ್‌ಐ ಯುಎಇ ಫೋರಂ