ʼವಾರ್ತಾಭಾರತಿʼ ಅನಿವಾಸಿ ಕನ್ನಡಿಗರು, ಇನ್ನಿತರ ಸಮುದಾಯಗಳ ಧ್ವನಿ: ಖತರ್ ಕರ್ನಾಟಕ ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು
ವಾರ್ತಾಭಾರತಿಗೆ 24ರ ಸಂಭ್ರಮ
ಖತರ್ : ವಾರ್ತಾಭಾರತಿ ಕಳೆದ 23 ವರ್ಷಗಳಿಂದ ಗಲ್ಫ್ ನಲ್ಲಿರುವ ಕನ್ನಡಿಗರ ಹಾಗು ಇನ್ನಿತರ ಸಮುದಾಯಗಳ ಸಮಸ್ಯೆ, ಆಶೋತ್ತರಗಳಿಗೆ ಧ್ವನಿಯಾಗುತ್ತಿದೆ. ಈಗ 24ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತಸದ ವಿಷಯ. ಕೊರೋನಾ ಸಂದರ್ಭದಲ್ಲಿ, ಇನ್ನಿತರ ಸಂಕಷ್ಟದ ಸಂದರ್ಭದಲ್ಲಿ ಇಲ್ಲಿನ ನೈಜ ವಿಷಯವನ್ನು ಜನರಿಗೆ ತಲುಪಿಸುವ ಗಲ್ಫ್ ನಲ್ಲಿರುವವರ ಜೀವನದ ಕೊಂಡಿಯಾಗಿ ಅನೇಕ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದೆ.
ವಾರ್ತಾಭಾರತಿಯ ವೆಬ್ ಸೈಟ್ ಈಗ ಇಡೀ ಜಗತ್ತನ್ನೇ ತಲುಪುವ ಮೂಲಕ ನೈಜ ಸುದ್ದಿಯನ್ನು ನೀಡುತ್ತಿದೆ. ವಾರ್ತಾಭಾರತಿ ಇದೇ ರೀತಿ ಮುಂದುವರಿದು ನೂರು ವರ್ಷಗಳ ಕಾಲ ಜನಪರವಾಗಿ ಸುದ್ದಿ ನೀಡುತ್ತಿರಲಿ ಎಂದು ಶುಭ ಹಾರೈಸುತ್ತೇನೆ.
-ಸುಬ್ರಹ್ಮಣ್ಯ ಹೆಬ್ಬಾಗಿಲು, ಅಧ್ಯಕ್ಷರು, ಖತರ್ ಕರ್ನಾಟಕ ಸಂಘ