ಯುಎಸ್ಎ‌: ಆ. 29ರಂದು ವಾರ್ತಾಭಾರತಿ ಸುದ್ದಿಸಂಸ್ಥೆಯು 24 ವರ್ಷಕ್ಕೆ ಕಾಲಿಡುತ್ತಿರುವುದು ಸಂತೋಷದ ವಿಷಯ. ಅಮೆರಿಕಾದ ಅನಿವಾಸಿ ಕನ್ನಡಿಗರನ್ನು ಪ್ರತಿನಿಧಿಸುವ 'ನಾವಿಕ' (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಹಾಗೂ ಇಡೀ ಕಾರ್ಯಕಾರಿ ತಂಡದ ಪರವಾಗಿ ವಾರ್ತಾಭಾರತಿಯ ಸಂಪಾದಕೀಯ ತಂಡಕ್ಕೆ ಹಾಗೂ ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ವಾರ್ತಾಭಾರತಿ ಸುದ್ದಿಸಂಸ್ಥೆಯು ತನ್ನ ದಿಟ್ಟ, ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಸಮಾಜಕ್ಕೆ ನೀಡುತ್ತಿ ರುವ ಸೇವೆಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿದು, ಜಾಗತಿಕ ಸಂಪರ್ಕಗಳನ್ನು ಸಾಧಿಸಿ ವಿದೇಶಗಳಲ್ಲಿರುವ ಅನಿವಾಸಿಗಳ ಸುದ್ದಿ, ಸಮಸ್ಯೆಗಳನ್ನು, ಸಾಧನೆಗಳನ್ನು ಮುನ್ನೆಲೆಗೆ ತರುವಲ್ಲಿ ವಾರ್ತಾಭಾರತಿ ಪ್ರಮುಖ ಪಾತ್ರವಹಿಸಿದೆ.

ಮುಂದಿನ ವರ್ಷ ರಜತ ಮಹೋತ್ಸವದ ಮೈಲಿಗಲ್ಲಿಗೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಾರ್ತಾಭಾರತಿ ಸುದ್ದಿ ಸಂಸ್ಥೆಯ ಇಡೀ ತಂಡಕ್ಕೆ ಯಶಸ್ಸು ಕೋರುತ್ತಾ ಶುಭ ಹಾರೈಸುತ್ತೇನೆ.

-ಡಾ. ಅನ್ನಪೂರ್ಣ ಭಟ್, ಅಧ್ಯಕ್ಷೆ, 'ನಾವಿಕ' ಯುಎಸ್ಎ‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor