ಬೈಕಂಪಾಡಿ: ಹಿರಿಯ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಇಸ್ಮಾಯಿಲ್ ಬಳ್ಳಾರಿ ನಿಧನ
Update: 2023-08-16 13:16 IST
ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಬಿ.ಕೆ ಇಸ್ಮಾಯಿಲ್ ಚಿತ್ರದುರ್ಗ (ರಾಂಪುರ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಸ್ಮಾಯಿಲ್ ಬಳ್ಳಾರಿ ಎಂದು ಹೆಸರುವಾಸಿಯಾಗಿದ್ದ ಅವರಿಗೆ 65 ವರ್ಷ ಪ್ರಾಯವಾಗಿತ್ತು. ಮೂಲತಃ ಬೈಕಂಪಾಡಿ ಅಂಗರಗುಂಡಿ ನಿವಾಸಿಯಾಗಿರುವ ಇವರು ಇದೀಗ ಕಾಟಿಪಳ್ಳದಲ್ಲಿ ವಾಸಿಸುತ್ತಿದ್ದರು.
ಕಳೆದ 40 ವರ್ಷಗಳಿಂದ ಪಿಡಬ್ಲ್ಯುಡಿ ಗುತ್ತಿಗೆದಾರರಾಗಿರುವ ಇಸ್ಮಾಯಿಲ್ ಅವರು ರಾಂಪುರದಲ್ಲೇ ನೆಲೆಸಿದ್ದರು. ಹೃದಯಾಘಾತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ರಾಂಪುರದಿಂದ ಕಾಟಿಪಳ್ಳಕ್ಕೆ ತರಲಾಗುತ್ತಿದ್ದು, ಬುಧವಾರ ರಾತ್ರಿ ಅಂತ್ಯಕ್ರಿಯೆ ನಡೆಯಲಿದೆ.
ಮೃತರು ಪತ್ನಿ, ಮೂವರು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.