ಕೊಳಲಬಾಕಿಮಾರು | ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆ ಬಗ್ಗೆ ಮಾಹಿತಿ
Update: 2025-12-20 17:57 IST
ಬಂಟ್ವಾಳ, ಡಿ.20: ತಾಲೂಕಿನ ಕೊಳಲಬಾಕಿಮಾರು ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ‘ಡಿಸೆಂಬರ್ ತಿಂಗಳ ಸಂಭ್ರಮ’ ಪ್ರಯುಕ್ತ ‘ಸಾರ್ವಜನಿಕ ಸೌಕರ್ಯ ಮತ್ತು ನನ್ನ ಜವಾಬ್ದಾರಿ’ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು.
ಕೊಳಲಬಾಕಿಮಾರು ಶಾಲಾ ಪರಿಸರದ ಮೂಡುಪಡುಕೋಡಿ ಅಂಚೆ ಕಚೇರಿಗೆ ವಿದ್ಯಾರ್ಥಿಗಳನ್ನು ಭೇಟಿ ಮಾಡಿಸಿ ಅಂಚೆ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಮುಹಮ್ಮದ್ ಖಲೀಲ್, ಶಾಲಾ ಮುಖ್ಯ ಶಿಕ್ಷಕ ರಾಜೇಶ ಕೆ., ಅತಿಥಿ ಶಿಕ್ಷಕಿ ನಿಕಿತಾ ಕೆ., ಅಂಚೆ ಕಚೇರಿಯ ಇತರರು ಉಪಸ್ಥಿತರಿದ್ದರು.