×
Ad

ಲಯನ್ಸ್ ಕ್ಲಬ್ ಮಂಗಳೂರು ಹೈಲ್ಯಾಂಡ್‌ಗೆ ಪ್ರಶಸ್ತಿ

Update: 2025-08-10 18:37 IST

ಮಂಗಳೂರು : ಲಯನ್ಸ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 317ಡಿ ವತಿಯಿಂದ ನಗರದ ವಾಮಂಜೂರು ಚರ್ಚ್ ಸಭಾಭವನದಲ್ಲಿ ಲಯನ್ಸ್ ಡಿಸ್ಟ್ರಿಕ್ಟ್ ಅವಾರ್ಡ್ ಪ್ರದಾನ ಕಾರ್ಯಕ್ರಮ ‘ತಾನಿಕಾ’ 2024-25 ಇತ್ತೀಚೆಗೆ ನಡೆಯಿತು.

ಈ ಸಂದರ್ಭ 5ರಿಂದ 20 ವರ್ಷದೊಳಗಿನ ಬೆಸ್ಟ್ ಕ್ಲಬ್ ಮತ್ತು ನಂಬರ್-1 ಕ್ಲಬ್ ವಿಭಾಗದಲ್ಲಿ ನಗರದ ಹೈಲ್ಯಾಂಡ್ ಲಯನ್ಸ್ ಕ್ಲಬ್ 2024-25ನೇ ಸಾಲಿನ ಉತ್ತಮ ಕ್ಲಬ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕ್ಲಬ್‌ನ ಉತ್ತಮ ಅಧ್ಯಕ್ಷ ಪ್ರಶಸ್ತಿಯನ್ನು ಮುಹಮ್ಮದ್ ಇಕ್ಬಾಲ್ ಶೇಕ್, ಕಾರ್ಯದರ್ಶಿ ರಾಮಚಂದರ್, ಖಜಾಂಚಿ ಸ್ಮಿತಾ ಅನಿಲ್ ಕುಮಾರ್ ಪಡೆದುಕೊಂಡರು.

ಪ್ರಶಸ್ತಿಯನ್ನು ಲಯನ್ಸ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 317ಡಿನ ಮಾಜಿ ಗವರ್ನರ್ ಭಾರತಿ ಬಿ.ಎಂ. ಪ್ರದಾನ ಮಾಡಿದರು. ಈ ಸಂದರ್ಭ ಜ್ಯೋತಿ ಎಸ್. ಶೆಟ್ಟಿ, ಡಾ.ಮೆಲ್ವಿನ್ ಡಿಸೋಜ, ಕುಡ್ಪಿಅರವಿಂದ್ ಶೆಣೈ, ಎಚ್.ಎ.. ತಾರನಾಥ್, ಗೋವಧರ್ನ್ ಕೆ. ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News