ವೈದ್ಯಕೀಯ ಶಿಕ್ಷಣಕ್ಕೆ ಮೀಫ್ ವತಿಯಿಂದ ವಿದ್ಯಾರ್ಥಿ ವೇತನ
ಮಂಗಳೂರು, ಆ.18: ಮೀಫ್‌ನಿಂದ ವೈದ್ಯಕೀಯ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಮೀಫ್ ಕಚೇರಿಯಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿ ಹೆಜಮಾಡಿ ಮೂಲದ ನಫೀಸತು ಝಕಿಯಾ ಅವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಈ ವಿದ್ಯಾರ್ಥಿ ವೇತನವನ್ನು ಜೋಕಟ್ಟೆಯ ಇ -ಗೇಟ್(E -GATE) ಫೌಂಡೇಶನ್ ವಿದ್ಯಾರ್ಥಿ ವೇತನದ ಪ್ರಾಯೋಜಕತ್ವ ವಹಿಸಿದೆ.
ಸಮಾರಂಭದಲ್ಲಿ ಮಾತನಾಡಿದ ಮೀಫ್ ಅಧ್ಯಕ್ಷ ಮೂಸಬ್ಬ .ಪಿ. ಬ್ಯಾರಿ ವಿದ್ಯಾರ್ಥಿನಿಯನ್ನು ಅಭಿನಂದಿಸಿ ವಿದ್ಯಾಭ್ಯಾಸದಲ್ಲಿ ಶ್ರೇಷ್ಠತೆ ಸಾಧಿಸಿ ಇತರರಿಗೆ ಮಾದರಿಯಾಗಲು ಹಾಗೂ ಪದವಿ ಪಡೆದನಂತರ ಸಮಾಜದ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನೆರವಾಗುವಂತೆ ಸಲಹೆ ನೀಡಿದರು.
2022 ರಿಂದ ಈ ತನಕ ಮೀಫ್ ವತಿಯಿಂದ 502 ಪ್ರತಿಭಾವಂತ ಹಾಗೂ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟುಗಳನ್ನು ಮಂಗಳೂರು ಮತ್ತು ಬೆಂಗಳೂರು ನಗರಗಳ ಪ್ರತಿಷ್ಠಿತ ಸಂಸ್ಥೆಗಳ ಸಹಕಾರದೊಂದಿಗೆ ಕಲ್ಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಮೀಫ್ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕನಸು ನನಸಾಗಿಲು ತನ್ನ ವಿವಿಧ ಯೋಜನೆಗಳ ಮೂಲಕ ನೆರವನ್ನು ಮುಂದುವರಿಸಲಿದೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ .ಪಿ. ಬ್ಯಾರಿ ತಿಳಿಸಿದ್ದಾರೆ.