×
Ad

ಕೋಲ್ಪೆ: ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ

Update: 2025-08-19 20:44 IST

ಬಂಟ್ವಾಳ : ಅಲ್ ಅಮೀನ್ ಚಾರಿಟಿ ಗ್ರೂಪ್ ಹಾಗೂ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸಿದ್ದೀಕ್ ಸೂರ್ಯ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇಡ್ಕಿದು ಗ್ರಾಮದ ಕೋಲ್ಪೆಯಲ್ಲಿ ಇತ್ತೀಚೆಗೆ ನಡೆಯಿತು.

ಶಿಬಿರವನ್ನು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಉದ್ಘಾಟಿಸಿದರು. ಕೋಲ್ಪೆ ಜುಮಾ ಮಸೀದಿ ಖತೀಬ್ ನೌಶಾದ್ ಕಾಮಿಲ್ ಸಖಾಫಿ ಅಲ್ ಪುರ್ಖಾನಿ ಬೆಲ್ಮ ದುಹಾ ನೆರವೇರಿಸಿದರು. ಗ್ರೂಪ್ ಆಫ್ ಕಣಚೂರಿನ ಮುಖ್ಯಸ್ಥ ಯು.ಕೆ.ಮೋನು ಹಾಜಿ ಕಣಚೂರು ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ.ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್, ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಅಳಿಕೆ, ಡಾ.ಅಶೋಕ್ ಕಣಚೂರು, ಡಾ. ಹೈದರ್ ಮರ್ದಾಳ, ಡಾ. ಫಾರೂಕ್ ಕೆದಿಲ. ನೋಟರಿ ವಕೀಲ ನೂರುದ್ದೀನ್ ಸಾಲ್ಮರ, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುಧಾಕರ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿದರು.

ಇದೇ ವೇಳೆ ಸಮಾಜ ಸೇವಕ ಅಬೂಬಕ್ಕರ್ ಕೋಲ್ಪೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. 624 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ರೋಗಿಗಳಿಗೆ ಉಚಿತವಾಗಿ ಕನ್ನಡಕ ಹಾಗೂ ಔಷಧಿ ವಿತರಿಸಲಾಯಿತು. ಪಾಟ್ರಕೋಡಿ, ಮಿತ್ತೂರು, ಕಬಕ, ಅಳಕೆಮಜಲು, ಉರಿಮಜಲು ಹಾಗೂ ಕಂಬಳಬೆಟ್ಟು ಪರಿಸರ ಗಳಿಂದ ಶಿಬಿರಕ್ಕೆ ಬರುವ ರೋಗಿಗಳಿಗೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ತಂಪು ಪಾನೀಯ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರು ಸಾಧಕ ವಿದ್ಯಾರ್ಥಿನಿಯರಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ಚಿನ್ನದ ಉಂಗುರ ನೀಡಿದರು.

ಕೋಲ್ಪೆ ಮಸೀದಿ ಅದ್ಯಕ್ಷ ಶೇಖಬ್ಬ ಹಾಜಿ ಕೋಲ್ಪೆ, ಅಳಕೆಮಜಲು ಖತೀಬ್ ಹಂಝ ಮದನಿ, ಅದ್ಯಕ್ಷ ಅಬ್ದುರ್ರಹ್ಮಾನ್ ಮಸ್ಕತ್, ಕಾರ್ಯದರ್ಶಿ ಎ.ಎಂ.ಮಹಮ್ಮದ್ ಕುಂಞಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಪರ್ಲೊಟ್ಟು ಮಸೀದಿ ಅಧ್ಯಕ್ಷ ರಶೀದ್ ಪರ್ಲೊಟ್ಟು, ಕಂಬಳಬೆಟ್ಟು ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಮೋನು, ಮಿತ್ತೂರು ಮಸೀದಿ ಕಾರ್ಯದರ್ಶಿ ಸಾದಿಕ್ ಅಕ್ಕರೆ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ನ್ಯಾಯವಾದಿ ಶಾಕಿರ್ ಪುತ್ತೂರು, ವಿವಿಧ ಕ್ಷೇತ್ರಗಳ ಗಣ್ಯರಾದ ಹರೀಶ್ ದೇವಸ್ಯ, ಪುರುಷೋತ್ತಮ ಕೋಲ್ಪೆ, ಅಬ್ದುಲ್ ಖಾದರ್ ಕನ್ಝ್, ಆದಂ ಕೆದುವಡ್ಕ, ಅಬ್ದುಲ್ ರಝಾಕ್ ಮದೀನಾ, ಅಶ್ರಫ್ ಹೋನೆಸ್ಟ್, ಉಮರ್ ಯು.ಎಸ್., ಮುನೀರ್ ಕಬಕ, ಫಾರೂಕ್ ಪಕ್ಕು ಕಬಕ, ಇಸ್ಮಾಯಿಲ್ ಪೋಳ್ಯ, ಇಸ್ಮಾಯಿಲ್ ಬಗ್ಗುಮೂಲೆ, ಫಾರೂಕ್ ತವಕ್ಕಲ್, ಸಿದ್ದೀಕ್ ಕಾರ್ಯಾಡಿ, ರವೀಂದ್ರನಾಥ ಮೇಲಾಂಟ, ಕೆ.ಎಸ್. ಅರ್ಶದ್ ಕಬಕ, ರಝಾಕ್ (ಆರ್ಟಿಒ)ಕಬಕ, ಬಾತಿಷ್ ಪಾಟ್ರಕೋಡಿ, ಹಾರಿಸ್ ಯುನೈನ್ ಕಬಕ, ಅಶ್ರಫ್ ಕೆ.ಜಿ.ಎನ್, ಶಾಕಿರ್ ಚಕ್ಕಿ ಅಳಕೆಮಜಲು, ಹಕೀಂ ಖಂದಕ್ ಮಿತ್ತೂರು, ಬಾತಿಶ್ ಅಳಕೆಮಜಲು, ಪ್ರದೀಪ್ ಕುಮಾರ್ ಶೆಟ್ಟಿ ಅಳಕೆಮಜಲು, ಕೃಷ್ಣ ಕಿಶೋರ್ ಭಟ್, ಅಬೂಬಕ್ಕರ್ ಮುಲ್ಲಾರು, ಹಮೀದ್ ಮೌಲಾ ಕಬಕ ಸುಲೈಮಾನ್ ಅಕ್ಕರೆ, ಆಸಿಫ್ ಕೋಲ್ಪೆ, ಹಮೀದ್ ಕನ್ಯಾನ, ಶುಕೂರ್ ಹಾಜಿ ಪುತ್ತೂರು, ಯಹ್ಯಾ ಸಾಲ್ಮರ, ರಿಯಾಝ್ ಪರ್ಲಡ್ಕ, ಜುನೈದ್ ಸಾಲ್ಮರ, ಚಾಂದ್ ಬಶೀರ್, ಹನೀಫ್ ಪುಂಚತ್ತಾರ್, ಅಬೂಬಕ್ಕರ್ ಐಎಂವೈಎ, ಶಾಫಿ ಸೂರ್ಯ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಹನೀಫ್ ಬಗ್ಗುಮೂಲೆ ಸ್ವಾಗತಿಸಿ, ಶಾಕಿರ್ ಅಳಕೆಮಜಲು ಪ್ರಾಸ್ತಾವನೆಗೈದರು. ಮುಹಮ್ಮದ್ ಸಿನಾನ್ ಅಳಕೆ ಮಜಲು ವಂದಿಸಿ, ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಮನ್ಸೂರ್ ನೇರಳಕಟ್ಟೆ, ಶಬ್ಬೀರ್ ಅಳಕೆಮಜಲು, ಸಾದಿಕ್ ಪಾಟ್ರಕೋಡಿ, ರಫೀಕ್ ಪಿ.ಎಸ್., ಗಫೂರ್ ಎ.ಜಿ.ಟಿ., ರಿಯಾಝ್ ಕೋಲ್ಪೆ, ಕಣಚೂರು ಆಸ್ಪತ್ರೆಯ ಪ್ರಮುಖರಾದ ರಶೀದ್, ಸಂದೀಪ್, ಅಸ್ಗರ್ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಸಹಕರಿಸಿದರು.











Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News