×
Ad

ಹಿರಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಪ್ರಯುಕ್ತ ಹಿತೈಷಿಗಳ ಶೈಕ್ಷಣಿಕ ಸಭೆ

Update: 2025-08-21 17:47 IST

ಉಳ್ಳಾಲ: ಶಾಂತಿ ಎಜುಕೇಶನಲ್ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ಹಿರಾ ಶಿಕ್ಷಣ ಸಂಸ್ಥೆ ಗಳ ರಜತ ಮಹೋತ್ಸವ ಆಚರಣೆ ಪ್ರಯುಕ್ತ ಮಜ್ಲಿಸ್-ಎ-ಅನ್ಸಾರ್-ಎ-ತ'ಲೀಮ್ ಹಿತೈಷಿ ಗಳ ಶೈಕ್ಷಣಿಕ ಸಭೆಯು ಹಿರಾ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ,ಡಾ. ವೈ. ಅಬ್ದುಲ್ಲಾ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಕೇಂದ್ರ ಆರಂಭಿಸುವುದು ಮುಖ್ಯ ಅಲ್ಲ, ಜನರ ಮೇಲೆ ವಿಶ್ವಾಸ ಗಳಿಸುವುದು ಮುಖ್ಯ ಆಗಿರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಜವಾಬ್ದಾರಿ ಶಿಕ್ಷಕರದ್ದು ಎಂದು ಲೆಕ್ಕಾಚಾರ ಮಾಡಿ ಅವರ ಪಾಲಿಗೆ ಪೋಷಕರು ಬಿಡಬಾರದು.ಶಿಕ್ಷಕರ ಜೊತೆ ಪೋಷಕರು ಕೈಜೋಡಿಸಿದರೆ ಮಾತ್ರ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಯೂನಿಟಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಾ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿರಾ ಶಿಕ್ಷಣ ಸಂಸ್ಥೆ ಅಭಿವೃದ್ಧಿಯ ಹೆಜ್ಜೆ ಇಟ್ಟಿದ್ದು, ಉತ್ತಮ ಸಾಧನೆ ಮಾಡಿದೆ. ಇಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿನಿ ಯರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ಬೆಳೆದರೆ ನಮ್ಮ ‌ಸೇವೆ ಸಾರ್ಥಕ ಆಗಿದೆ ಎಂದು ಹೇಳಬಹುದು ಎಂದರು

ಔರಾ ಮಹಿಳಾ ನಿಯತಕಾಲಿಕೆಯ ಸಂಪಾದಕಿ ಸಮೀನಾ ಅಫ್ಶಾನ್ ಮಾತನಾಡಿ, ಹೆಣ್ಣು ಮಕ್ಕಳ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆ ಹಾಗೂ ನಾವು ನೀಡಬೇಕಾದ ಪ್ರೋತ್ಸಾಹದ ಬಗೆ ಮಾಹಿತಿ ನೀಡಿದರು.

ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಕುಂಞಿ ಮಾತನಾಡಿ, ಯಾವುದೇ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಉನ್ನತ ಮೌಲ್ಯಾಧಾರಿತ ಶಿಕ್ಷಣ ಪಡೆಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹಿರಾ ಸಂಸ್ಥೆ ಕೊಡುಗೆ ಮಹತ್ವದ್ದು ಎಂದರು.

ಮೌಲಾನ ಸುಹೈಬ್ ಹುಸೇನಿ ನದ್ವಿ ಮಾತನಾಡಿದರು.

ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ಮೆಹಮೂದ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮ ದಲ್ಲಿ ಕೆಎಸ್ಎ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಯ ಉಪಾಧ್ಯಕ್ಷ ,ಅಬ್ದುಲ್ ರಹಿಮಾನ್ ಕರ್ನಿರೆ, ಮಫೂಝರ್ ರಹ್ಮಾನ್ , ಪಿ.ಎಸ್.ಮೊಹಮ್ಮದ್, ಶರೀಫ್ ಸೂರಲ್ಪಾಡಿ, ಶಾಂತಿ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಂ  ಉಪಸ್ಥಿತರಿದ್ದರು.

ಶಾಂತಿ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಕೆ.ಎಮ್.ಅಶ್ರಫ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಅಧಿಕಾರಿ ಜಾಕೀರ್ ಹುಸೈನ್ ವಂದಿಸಿದರು. ಆಯಿಷತ್ ಶೈಮಾ,ಅಮ್ರಾ ಮೊಹಮ್ಮದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News