×
Ad

ಯುವತಿ ನಾಪತ್ತೆ

Update: 2025-09-04 20:10 IST

ಮಂಗಳೂರು, ಸೆ.4: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅಶ್ವಿನಿ (21) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಈಕೆಗೆ ಕಳೆದ 1 ವರ್ಷದಿಂದ ಇನ್‌ಸ್ಟಾಗ್ರಾಂನಲ್ಲಿ ಚಿಕ್ಕಬಳ್ಳಾಪುರದ ಸಿದ್ಲಗಟ್ಟೆ ಎಂಬಲ್ಲಿನ ಮಹೇಶ್ ಎಂಬಾತನ ಪರಿಚಯವಾಗಿತ್ತು. ಬಳಿಕ ಆತನೊಂದಿಗೆ ವಿವಾಹವಾಗುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದಳು. ಕಳೆದ ಒಂದು ತಿಂಗಳಿನಿಂದ ಮನೆಯವರಿಗೆ ಕರೆ ಮಾಡಿ ನನ್ನನ್ನು ಇಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎನ್ನುತ್ತಾ ಸೆ.1ರಂದು ರಾತ್ರಿ ಸುಮಾರು 11:30ಕ್ಕೆ ನಗರದ ಮನೆಗೆ ಬಂದಿದ್ದಳು. ಸೆ. 2ರಂದು ಹಗಲು ಮನೆಯಲ್ಲೇ ಇದ್ದು ಮರುದಿನ ಬೆಳಗ್ಗಿನ ಜಾವ 4ಕ್ಕೆ ಮನೆಯಿಂದ ಕಾಣೆಯಾಗಿದ್ದಾಳೆ.

ಸುಮಾರು 5.3 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ ಈಕೆ ಕನ್ನಡ, ಇಂಗ್ಲಿಷ್, ತುಳು ಭಾಷೆ ಮಾತನಾಡುತ್ತಾಳೆ. ಈಕೆಯನ್ನು ಕಂಡವರು ವಾಮಂಜೂರಿನಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News