×
Ad

ʼಮೀಫ್‌ʼ ವತಿಯಿಂದ ಶಿಕ್ಷಕಿಯರ ಕಾರ್ಯಾಗಾರಕ್ಕೆ ಚಾಲನೆ

Update: 2025-09-10 19:16 IST

ಮಂಗಳೂರು, ಸೆ.10: ಮೀಫ್ ಒಕ್ಕೂಟದ ವ್ಯಾಪ್ತಿಯಲ್ಲಿರುವ ವಿದ್ಯಾಸಂಸ್ಥೆಗಳ ಬಿ.ಎಡ್.ಯೇತರ ಶಿಕ್ಷಕಿಯರಿಗೆ ಒಂದು ವಾರಗಳ ಕಾಲ ನಡೆಸುವ ಕಾರ್ಯಾಗಾರಕ್ಕೆ ನಗರದ ಹ್ಯಾಟ್‌ಹಿಲ್‌ನಲ್ಲಿರುವ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಂಟಿ ನಿರ್ದೇಶಕಿ ಪುಷ್ಪಲತಾ ಎಚ್.ಕೆ. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂತ ಆ್ಯನ್ಸ್ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಸಿಸ್ಟರ್ ದೊರೋತಿ ಡಿಸೋಜ ಇಂದಿನ ತಾಂತ್ರಿಕ ಯುಗದಲ್ಲಿ ಶಿಕ್ಷಕಿಯರಿಗೆ ನಿರಂತರ ತರಬೇತಿ ಅವಶ್ಯಕತೆಯಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡಿ ಒಂದು ವಾರ ನಡೆಯಲಿರುವ ಈ ಕಾರ್ಯಾ ಗಾರವನ್ನು ಕುಂದಾಪುರದ ಕೋಡಿ ಬ್ಯಾರೀಸ್ ಬಿ.ಎಡ್. ಕಾಲೇಜಿನ ಪ್ರಾಯೋಜಕತ್ವದಲ್ಲಿ ಎಂಟು ಪ್ರಾಧ್ಯಾಪಕರ ತಂಡ ನಡೆಸುತ್ತಿದೆ. ಸುಮಾರು 40 ವಿದ್ಯಾಸಂಸ್ಥೆಗಳ 60 ಶಿಕ್ಷಕಿಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕುಂದಾಪುರ ಬ್ಯಾರೀಸ್ ಬಿಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಫಿರ್ದೋಸ್, ಸಹಾಯಕ ಪ್ರಾಧ್ಯಾಪಕಿ ಶಾಝಿಯ, ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್, ಕಾರ್ಯದರ್ಶಿಗಳಾದ ಅನ್ವರ್ ಹುಸೇನ್, ರಹ್ಮತುಲ್ಲಾಹ್, ಅಡ್ವೋಕೇಟ್ ಉಮರ್ ಫಾರೂಕ್, ಅಬ್ದುಲ್ ಅಝೀಝ್, ಅಶ್ರಫ್ ಬಾವ ಉಪಸ್ಥಿತರಿದ್ದರು.

ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಖತೀಜತುಲ್ ಕುಬ್ರಾ ಸ್ವಾಗತಿಸಿದರು. ಉಪಾಧ್ಯಕ್ಷ ಪರ್ವೇಝ್ ಅಲಿ ವಂದಿಸಿದರು. ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News