ರೋಶನಿ ನಿಲಯ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಅಂತರ್ ಕಾಲೇಜು ಉತ್ಸವ ‘ಎಕ್ಸ್‌ಪ್ರೆಸನ್ಸ್ ’ ಉದ್ಘಾಟನೆ
Update: 2025-09-17 23:38 IST
ಮಂಗಳೂರು, ಸೆ.17: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಅಂತರ್‌ಕಾಲೇಜು ವಿದ್ಯಾರ್ಥಿಗಳ ಉತ್ಸವ ‘ಎಕ್ಸ್‌ಪ್ರೆಶನ್ಸ್ -2025’ ಬುಧವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡಲಾಗುವ ಟ್ರೋಫಿಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪರೀಕ್ಷಾಂಗ ನಿಯಂತ್ರಕರಾದ ಪ್ರೊ. ಸಿಸಿಲಿಯಾ ಎಫ್ ಗೊವೀಯಸ್ ವಹಿಸಿದ್ದರು. ದಿನ ಪೂರ್ತಿ ನಡೆದ ಈ ಸ್ಪರ್ಧಾ ಕೂಟದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಎಂಟು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಾರಿಕ್ ಅಂಕಿತಾ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇನಿಕಾ ಉತ್ಸವದ ಪರಿಚಯವನ್ನು ನೀಡಿದರು.