×
Ad

ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ವಿಟ್ಲದ ಸುನೀಲ್ ಆಯ್ಕೆ

Update: 2025-09-24 17:31 IST

ವಿಟ್ಲ: ವಿಟ್ಲದ ಫಿಟ್‍ನೆಸ್ ಜಿಮ್ ನ ಮಾಲಕ ಸುನೀಲ್ ಪಾಯಸ್ ಅವರು ಸಿಂಗಾಪುರದಲ್ಲಿ ನಡೆದ ದೇಹದಾರ್ಡ್ಯ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದು ಅಮೇರಿಕಾದಲ್ಲಿ ನಡೆಯಲಿರುವ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸಿಂಗಾಪುರದಲ್ಲಿ ನಡೆದ ಐ.ಎನ್.ಬಿ.ಎ ನ್ಯಾಚುರಲ್ ಏಷ್ಯಾನ್ ಗೇಮ್ ಓಪನ್ ಬಾಡಿ ಬಿಲ್ಡಂಗ್‍ನಲ್ಲಿ ವಿವಿಧ ವಿಭಾಗ ದಲ್ಲಿ 4 ಚಿನ್ನದ ಪದಕ ಪಡೆದಿದ್ದಾರೆ. ನವೆಂಬರ್ ನಲ್ಲಿ ಅಮೇರಿಕಾದಲ್ಲಿ ನಡೆಯುವ ನ್ಯಾಚುರಲ್ ಓಲಂಪಿಯಾಕ್ಕೆ ಇವರು ಆಯ್ಕೆಯಾಗಿದ್ದಾರೆ.

ಇವರು ಕಳೆದ ಹಲವಾರು ವರ್ಷಗಳಿಂದ ವಿಟ್ಲದ ಅರಮನೆ ರಸ್ತೆಯಲ್ಲಿ ಫಿಟ್ ನೆಸ್ ಜಿಮ್ ನಡೆಸಿಕೊಂಡು ಬರುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಸುನೀಲ್ ಅವರು ಈ ಹಿಂದೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News