×
Ad

ದ.ಕ. ಜಿಲ್ಲಾ ಚಿತ್ರಕಲಾ ಸಮ್ಮೇಳನ ಲಾಂಛನ ಬಿಡುಗಡೆ

Update: 2025-09-24 19:45 IST

ಮಂಗಳೂರು: ದ.ಕ.ಜಿಲ್ಲಾ ಚಿತ್ರಕಲಾ ಸಮ್ಮೇಳನ ಸಮಿತಿಯ ವತಿಯಿಂದ ನವೆಂಬರ್ ೯ರಂದು ನಡೆಯಲಿರುವ ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಮ್ಮೇಳನ ವರ್ಣಯಾನ 2025 ಇದರ ಲಾಂಛನ ಹಾಗೂ ಶಿರ್ಷಿಕೆ ಬೆಡುಗಡೆ ಕಾರ್ಯಕ್ರಮವು ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ನಡೆಯಿತು.

ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ರೆಕ್ಟರ್ ರೆ.ಫಾ. ಮೆಲ್ವಿನ್ ಪಿಂಟೋ ಎಸ್.ಜೆ. ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರೆ.ಫಾ.ಜಾನ್ಸನ್ ಪಿಂಟೋ ಎಸ್‌ಜೆ ಬಿಡುಗಡೆಗೊಳಿಸಿದರು. ಸಮ್ಮೇಳನದ ಶಿರ್ಷಿಕೆಯನ್ನು ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಮಹಾಲಸಾ ಕಲಾ ಶಾಲೆಯ ಪ್ರಾಚಾರ್ಯ ಮೋಹನ್ ಕುಮಾರ್ ಬಿಡುಗಡೆಗೊಳಿಸಿದರು.

ಮಂಗಳೂರು ಉತ್ತರ ಚಿತ್ರಕಲಾ ಶಿಕ್ಷಕರ ಘಟಕದ ಅಧ್ಯಕ್ಷ ರಾಜೇಶ್ವರಿ ಸಮ್ಮೇಳನ ಸಮಿತಿಯ ಕೋಶಾಧಿಕಾರಿ ದಿನೇಶ್ ಶೆಟ್ಟಿಗಾರ್ ಸುಚೇತ, ಅಂಬಿಕಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News