×
Ad

ನಿವೃತ್ತ ಡಿಸಿಪಿ ಧರ್ಮಯ್ಯ ನಿಧನ

Update: 2025-09-24 21:18 IST

ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಡಿ. ಧರ್ಮಯ್ಯ (71) ಬೆಂದೂರುವೆಲ್‌ನ ತನ್ನ ಮನೆಯಲ್ಲಿ ಬುಧವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ಹೊಸೂರಿನವರಾಗಿದ್ದ ಅವರು ಮೈಸೂರಿನಲ್ಲಿ ಎಸ್ಸೈ ಆಗಿ ಸೇವೆ ಆರಂಭಿಸಿದರು. ಬಳಿಕ ಯಳಂದೂರು, ಚಾಮರಾಜನಗರ, ವಿರಾಜಪೇಟೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಬೆಳ್ತಂಗಡಿ, ಕಾರ್ಕಳ, ಉಡುಪಿಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆದ ಬಳಿಕ ಡಿವೈಎಸ್‌ಪಿಯಾಗಿ ಭಡ್ತಿ ಹೊಂದಿದರು. ಬೆಂಗಳೂರಿನಲ್ಲಿ ಎಸಿಪಿಯಾಗಿ, ಮಂಗಳೂರಿನಲ್ಲಿ ಡಿಸಿಪಿ (ಅಪರಾಧ-ಸಂಚಾರ) ವಿಭಾಗದಲ್ಲಿ ಕಾರ್ಯನಿವರ್ಹಹಿಸಿ 2013ರಲ್ಲಿ ಸೇವಾ ನಿವೃತ್ತರಾಗಿದ್ದರು. ನಿವೃತ್ತರಾದ ಬಳಿಕ ಮಂಗಳೂರಿನಲ್ಲೇ ನೆಲೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News