ಅಂತಾರಾಷ್ಟ್ರೀಯ ಸಂಗೀತ ದಿನ: ಕಾರ್ಮೆಲಿಟಾರಿಗೆ ಗೌರವ ಘೋಷಣೆ
Update: 2025-10-03 18:27 IST
ಮಂಗಳೂರು: ಮಾಂಡ್ ಸೊಭಾಣ್ ಮತ್ತು ಸುಮೇಳ್ ನೀಡುವ ಅಂತಾರಾಷ್ಟ್ರೀಯ ಸಂಗೀತ ದಿನದ ಸನ್ಮಾನವನ್ನು ಸಂಗೀತ ತರಬೇತುದಾರ ಮಂಗಳೂರಿನ ಕಾರ್ಮೆಲಿಟಾ ಆಲ್ವಾರಿಸ್‌ಗೆ ಘೋಷಿಸಲಾಗಿದೆ. ಶಕ್ತಿನಗರದ ಕಲಾಂಗಣ ದಲ್ಲಿ ಅ.5ರಂದು ಸಂಜೆ 6.30ಕ್ಕೆ ನಡೆಯುವ ತಿಂಗಳ ವೇದಿಕೆ ಸರಣಿಯ 286ನೇ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ತನ್ನ 9ನೇ ವರ್ಷದಲ್ಲಿ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಅವರು ಮರಿಯಾಣ್ ಪಿಂಟೊ, ವಿಮಲಾ ಲೋಬೊ, ಗ್ಲೇಡಿಸ್ ಸಿಲ್ವರ್ ಇತ್ಯಾದಿ ಸಂಗೀತ ಶಿಕ್ಷಕರಿಂದ ವಯೊಲಿನ್, ಕೀ ಬೋರ್ಡ್ ಕಲಿತರು. ಲಂಡನ್‌ನ ಪ್ರತಿಷ್ಟಿತ ಟ್ರಿನಿಟಿ ಕಾಲೇಜಿನಿಂದ ಉತ್ತೀರ್ಣರಾದ ಬಳಿಕ ಎಲ್ಲಾ ವಯೋಮಾನದವರಿಗೆ ತರಬೇತು ನೀಡತೊಡಗಿದರು. ಸಂದೇಶ ಪ್ರತಿಷ್ಟಾನದ ಸ್ಥಾಪಕ ಕಾರ್ಯದರ್ಶಿಯಾಗಿ ಹಾಗೂ ರಜಾ ಶಿಬಿರಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.