×
Ad

ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ: ಉಮರ್ ಯು.ಎಚ್.

ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ಭಾಷಾ ದಿನಾಚರಣೆ

Update: 2025-10-03 21:35 IST

ಕಲ್ಲಡ್ಕ, ಅ.3: ಯಾವುದೇ ಜನ ಸಮುದಾಯದ ಮಾತೃಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಆ ಸಮುದಾಯದ ಪರಿಪೂರ್ಣ ಬದುಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಚ್. ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕಲ್ಲಡ್ಕ ಮುರಬೈಲ್ ಯೂನಿಯನ್‌ನ ಸಹಯೋಗದೊಂದಿಗೆ ಕಲ್ಲಡ್ಕ ಮ್ಯೂಸಿಯಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಾತೃಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ನಡೆದಾಗ ಮಾತ್ರ ಆ ಸಮುದಾಯ ಜೀವಂತ ವಾಗಿರಲು ಸಾಧ್ಯ ಎಂದು ಉಮರ್ ಯು. ಎಚ್. ಅಭಿಪ್ರಾಯಪಟ್ಟರು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷಾ ದಿನಾಚರಣೆಯ ಭಿತ್ರಿಪತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಬ್ಯಾರಿ ಫೌಂಡೇಶನ್ ಅಧ್ಯಕ್ಷ ಪಿ.ಎ. ರಹೀಮ್, ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ಬಾಸ್ ಅಲಿ ಬಿ.ಎಂ., ಕಲ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಹಾಜಿ ಕೋಡಿ, ದ.ಕ. ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್ ಅಲಿ, ಲೇಖಕಿ ಡಾ. ಜುವೇರಿಯಾ ಮುಫೀದಾ, ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್, ಕಲ್ಲಡ್ಕ ಮುರಬೈಲ್ ಯೂನಿಯನ್‌ನ ಅಧ್ಯಕ್ಷ ಹಬೀಬ್ ಡೈಲಿ ಫ್ರೆಶ್, ಕಲ್ಲಡ್ಕ ಮ್ಯೂಸಿಯಂನ್ ಮುಹಮ್ಮದ್ ಯಾಸಿರ್, ಬ್ಯಾರಿ ಅಕಾಡಮಿಯ ಮಾಜಿ ಸದಸ್ಯರಾದ ಅಬ್ದುಲ್ ಲತೀಫ್ ನೇರಳಕಟ್ಟೆ, ಝಕರಿಯಾ ಕಲ್ಲಡ್ಕ, ಪಿ. ಮುಹಮ್ಮದ್ ಭಾಗವಹಿಸಿದ್ದರು.

ಸದಸ್ಯರಾದ ಬಿ.ಎಸ್. ಮುಹಮ್ಮದ್, ಹಮೀದ್ ಹಸನ್ ಮಾಡೂರು, ಹಾಜಿ ಯು.ಕೆ. ಹಮೀದ್ ಉಪಸ್ಥಿತರಿದ್ದರು. ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೊಲೊ ಬ್ಯಾರಿ ಗೀತೆಗಳನ್ನು ಹಾಡಿದರು. ಅಬ್ದುಲ್ ಲತೀಫ್ ಮದನಿ ಕಿರಾಅತ್ ಪಠಿಸಿದರು. ಅಕಾಡಮಿಯ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿದರು. ಸದಸ್ಯೆ ಸಾರಾ ಅಲಿ ಪರ್ಲಡ್ಕ ವಂದಿಸಿದರು. ಸದಸ್ಯ ಯು. ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News