×
Ad

ಮಂಗಳೂರು: ರಾಜ್ಯದ ನಾಲ್ವರು ಜೆಸ್ವಿಟ್ ಉಪಯಾಜಕರಿಗೆ ಗುರುದೀಕ್ಷೆ

Update: 2025-10-04 19:41 IST

ಮಂಗಳೂರು: ಕರ್ನಾಟಕ ಜೆಸ್ವಿಟ್ ಪ್ರಾಂತದ ನಾಲ್ವರು ಉಪಯಾಜಕರುಗಳಿಗೆ ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಅವರು ನಗರದ ಫಾತಿಮಾ ಧ್ಯಾನಮಂದಿರದಲ್ಲಿ ಯಾಜಕ ದೀಕ್ಷೆಯನ್ನು ನೀಡಿದರು.

ವಂ. ನಿಶಾಂತ್ ನೊರೊನ್ಹಾ, ವಂ. ಶರೂನ್ ಡಿಸೋಜ, ವಂ. ಪ್ರಥ್ವಿ ರೋಡ್ರೀಗಸ್, ವಂ. ಪ್ರೀತೇಶ್ ಮಿಸ್ಕಿತ್ ಗುರುದೀಕ್ಷೆ ಪಡೆದ ಉಪಯಾಜಕರಾಗಿದ್ದಾರೆ.

ಬಳಿಕ ಮಾತನಾಡಿದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಓರ್ವ ಯಾಜಕನು ಕ್ರಿಸ್ತನ ಪ್ರವಾದಿಯಾಗಿ ಕ್ರಿಸ್ತನನ್ನು ಎಲ್ಲೆಡೆಯಲ್ಲೂ ಪಸರಿಸುವ ಕಾರ್ಯದಲ್ಲಿ ತೊಡಗಬೇಕು. ಇಂದು ಹಲವು ಕಾರಣಗಳಿಂದ ಸಮಾಜದಲ್ಲಿ ಕತ್ತಲೆ ತುಂಬಿದೆ. ಇಂತಹ ಸನ್ನಿವೇಶದಲ್ಲಿ ತಮ್ಮ ಸೇವೆಗೆ ನೀಡಿದ ಜನತೆಗೆ ಭರವಸೆ ತುಂಬುವ ಮತ್ತು ಕತ್ತಲೆಯನ್ನು ದೂರ ಮಾಡುವ ಪ್ರವಾದಿಗಳಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ಜೆಸ್ವಿಟ್ ಪ್ರಾಂತದ ಅಧಿಕಾರಿಗಳಾದ ವಂ.ಡಯನೀಶಿಯಸ್ ವಾಸ್ ಜೆ.ಸ., ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂ. ಐವನ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.

ವಂ.ವಿಶ್ವಾಸ್ ಮಿಸ್ಕಿತ್ ಬಲಿಪೂಜೆ ನಿರ್ವಹಿಸಿದರು. ವಂ.ಲೆಸ್ಟನ್ ಲೋಬೊ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News