ಏಷ್ಯನ್ ಯೂತ್ ಗೇಮ್ಸ್‌ಗೆ ಆಯಿಶಾ ಹೈಫಾ ಆಯ್ಕೆ
Update: 2025-10-04 19:44 IST
ಮಂಗಳೂರು, ಅ.4: ಬಹರೈನ್‌ನಲ್ಲಿ ನಡೆಯಲಿರುವ 3ನೇ ಏಷ್ಯನ್ ಯೂತ್ ಗೇಮ್ಸ್‌ನ ಆಯ್ಕೆಗಾಗಿ ನಡೆದ ಟ್ರಯಲ್ಸ್ ನಲ್ಲಿ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆಯಾಗಿದ್ದಾರೆ.
ಸೆ.30ರಂದು ಕಾಶ್ಮೀರದ ಶ್ರೀನಗರ ಎಸ್.ಕೆ. ಒಳಾಂಗಣ ಕ್ರಿಡಾಂಗಣದಲ್ಲಿ ಈ ಆಯ್ಕೆ ಟ್ರಯಲ್ ನಡೆಯಿತು. ಕಿನ್ಯ ಗ್ರಾಮದ ಮೊಯ್ದಿನ್ ಹನೀಫ್ ಹಾಗೂ ಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಶಾ ಹೈಫಾ ಈ ಹಿಂದೆ ಪೆನ್ಕಾಕ್ ಸಿಲಾಟ್ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು.
ಈಕೆಗೆ ಟೀಂ ಎಂ. ಟೈಗರ್ಸ್‌ನ ಮಾಸ್ಟರ್ ಆಶಿಫ್, ಮಾಸ್ಟರ್ ಅಯಾಝ್ ಬರುವಾ ತರಬೇತು ನೀಡಿದ್ದಾರೆ.