×
Ad

ಎಸ್ ಎಲ್ ಭೈರಪ್ಪ ಬದುಕಿನ ಅನುಭವಗಳನ್ನು ಕೃತಿಗಿಳಿಸಿದ ಸಾಹಿತಿ: ಡಾ.ಅಜಕ್ಕಳ ಗಿರೀಶ್

Update: 2025-10-06 19:02 IST

ಮಂಗಳೂರು: ಬದುಕಿನ ಅನುಭವಗಳನ್ನು ಕಲಾಕೃತಿಯನ್ನಾಗಿಸಿ ಜನ ಮೆಚ್ಚುಗೆ ಪಡೆದ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಎಂದು ಚಿಂತಕ ಡಾ. ಅಜಕ್ಕಳ ಗಿರೀಶ್ ಭಟ್ ನುಡಿದರು.

ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ, ಚಿರಂತನ ಚಾರಿಟೇಬಲ್ ಟ್ರಸ್ಟ್, ನಾಗರಿಕ ಸಲಹಾ ಸಮಿತಿ, ಸುರತ್ಕಲ್ ಮತ್ತು ಸಪ್ತಕ ಬೆಂಗಳೂರು ಜೊತೆಯಾಗಿ ಸುರತ್ಕಲ್ ನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭೈರಪ್ಪ ನಮನ, ಗಾಯನ, ವಾದನ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡುತ್ತಾ, ಜೀವನದ ಸತ್ಯ ಹಾಗೂ ಮೌಲ್ಯಗಳಿಗೆ ಮಹತ್ವ ವನ್ನು ನೀಡಿ ನುಡಿದಂತೆ ನಡೆದವರು. ನವ್ಯ ಸಾಹಿತ್ಯದ ಪ್ರಭಾವ ದ ಕಾಲದಲ್ಲಿ ವಿಭಿನ್ನ ವಾಗಿ ಕಲಾಕೃತಿ ಗಳನ್ನು ನೀಡಿದ ಭೈರಪ್ಪ ರು ನಮಗೆ ಹೆಚ್ಚು ಆಪ್ತ ರಾಗುತ್ತಾರೆ. ಧರ್ಮ ಶ್ರೀ ಕಾದಂಬರಿ ಯಿಂದ ತೊಡಗಿ ಉತ್ತರ ಕಾಂಡ ದ ವರೆಗಿನ ಅವರ ಕೃತಿ ಗಳು ಅನನ್ಯ ಅನುಭವಗಳನ್ನು ನೀಡುತ್ತವೆ ಹಿರಿದಾದ ಅನುಭವ, ವಸ್ತು ವೈವಿಧ್ಯ, ಕಲೆಗಾರಿಕೆ, ನಂಬಿದ ತತ್ವಗಳ ಕುರಿತು ಬದ್ಧತೆ ಗಳಿಂದ ವಿವಿಧ ನೆಲೆಗಳ ಕಾದಂಬರಿ ಗಳನ್ನು ಸಾಹಿತ್ಯ ಲೋಕಕ್ಕೆ ನೀಡಲು ಅವರಿಗೆ ಸಾಧ್ಯವಾಯಿತು. ತನ್ನನ್ನು ಅಕ್ಕರೆಯಿಂದ ಕಂಡ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಮೂಲಕ ವಿಶಿಷ್ಟ ಸಾಹಿತಿಯಾಗಿ ಜನಮಾನಸದ ಪ್ರೀತಿ ಗಳಿಸಿದರು" ಎಂದು ಅವರು ನುಡಿದರು.

ಮಣಿಕೃಷ್ಣ ಸ್ವಾಮಿ ಅಕಾಡೆಮಿ ಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಪುಷ್ಪ ನಮನ ಸಲ್ಲಿಸಿದರು. ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ದೀಪ ಬೆಳಗಿಸಿದರು.

ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಕೃಷ್ಣ ಮೂರ್ತಿ ಸ್ವಾಗತಿಸಿದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿ ಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ವಂದಿಸಿದರು. ಪ್ರಾಧ್ಯಾಪಕ ಕುಮಾರಸ್ವಾಮಿ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಚಿರಂತನ ಚಾರಿಟೇಬಲ್ ಟ್ರಸ್ಟ್ ನ ಮೂರ್ತಿ ದೇರಾಜೆ, ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ನೀಹಾರಿಕ ದೇರಾಜೆ, ಸುರತ್ಕಲ್ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಿತು.ತಬಲಾ ದಲ್ಲಿ ಶ್ರೀವತ್ಸ ಶರ್ಮಾ, ಪಡುಬಿದ್ರೆ ಮತ್ತು ಸಂವಾದಿನಿ ಯಲ್ಲಿ ಮೇಧಾ ಭಟ್, ಮಂಗಳೂರು ಮತ್ತು ಸುಜಾತ ಭಟ್ ಸಹಕರಿಸಿದರು, ಕಿರಣ್ ಹೆಗಡೆ ಮಗೆಗಾರ ಅವರಿಂದ ಬಾನ್ಸುರಿ ವಾದನ ಕಚೇರಿ ನಡೆಯಿತು. ಭಾರವಿ ದೇರಾಜೆ ತಬಲಾ ದಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News