×
Ad

ನಾಲ್ಕು ಚಿನ್ನದೊಂದಿಗೆ ಯಜತ್ ಕೋಟ್ಯಾನ್ ರಾಷ್ಟ್ರ ಮಟ್ಟಕ್ಕೆ

Update: 2025-10-07 19:17 IST

ಮಂಗಳೂರು: ಮೂಡುಶೆಡ್ಡೆ ಗ್ರಾಮದ ಶಾರದಾ ಶುಭೋದಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಯಜತ್ ಎನ್. ಕೋಟ್ಯಾನ್ ಗುರುಪುರ ಅವರು ಬೆಂಗಳೂರಿನಲ್ಲಿ ನಡೆದ ಅಂಡರ್ 14 ವಿಭಾಗದ ರಾಜ್ಯ ಹಾಗೂ ದಕ್ಷಿಣ ಮಧ್ಯ ವಲಯ ಶಾಟ್‌ಪುಟ್, 200 ಮೀ. ರನ್ನಿಂಗ್, 80 ಮೀ. ಹರ್ಡಲ್ಸ್ ಹಾಗೂ 4/100 ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ 4 ಚಿನ್ನದ ಪದಕ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅತ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆಗೈದ ಈತ ಜಿಲ್ಲೆ, ರಾಜ್ಯ ಮತ್ತು ವಲಯ ಮಟ್ಟದಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಬಾರಿ ಮಂಗಳೂರು ದಸರಾ ಕ್ರೀಡೋತ್ಸವದಲ್ಲಿ ಮೂರು ಪದಕ ಗಳಿಸಿದ್ದಾರೆ.

ಅ.31ರಿಂದ ನ. 4ರವರೆಗೆ ಹಾಸನದ ಮ್ಯಾಂಗ್ಲೋರ್ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧಾಕೂಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News