×
Ad

ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಕೋರ್ಸ್‌ಗಳ ಆರಂಭ

Update: 2025-10-07 19:41 IST

ಮಂಗಳೂರು, ಅ.7: ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಹೊಸ ಶೈಕ್ಷಣಿಕ ವರ್ಷದ ಕೋರ್ಸ್‌ಗಳ ಉದ್ಘಾಟನೆ ಮಂಗಳವಾರ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

39 ನೇ ಬ್ಯಾಚ್ ಬಿ.ಎಸ್ಸಿ. ನರ್ಸಿಂಗ್, 38ನೇ ಬ್ಯಾಚ್ ಪೋಸ್ಟ್ ಬೇಸಿಕ್ ಬಿ.ಎಸ್ಸಿ. ನರ್ಸಿಂಗ್ ಮತ್ತು 34ನೇ ಬ್ಯಾಚ್ ಎಂ.ಎಸ್ಸಿ. ನರ್ಸಿಂಗ್ ಕೋರ್ಸ್‌ಗಳಿಗೆ ಚಾಲನೆ ನೀಡಲಾಯಿತು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೆ.ಡಾ. ಮೈಕೆಲ್ ಸಂತುಮೇಯರ್ ಮುಖ್ಯ ಅತಿಥಿ ಯಾಗಿ ಮಾತನಾಡಿ ಸಮರ್ಪಣೆ ಮತ್ತು ಸಹಾನುಭೂತಿಯೊಂದಿಗೆ ನರ್ಸಿಂಗ್‌ನಲ್ಲಿ ಶ್ರೇಷ್ಠತೆಯನ್ನು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ ವಹಿಸಿ ಮಾತನಾಡಿ ಫಾದರ್ ಮುಲ್ಲರ್ ಸಂಸ್ಥೆಯು ಕೌಶಲ್ಯ ಪೂರ್ಣ ಮತ್ತು ಸೇವಾ-ಆಧಾರಿತ ನರ್ಸಿಂಗ್ ವೃತ್ತಿಪರರನ್ನು ರೂಪಿಸುತ್ತಿದೆ ಎಂದರು.

ವೇದಿಕೆಯಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ಜಾರ್ಜ್ ಜೀವನ್ ಸಿಕ್ವೇರಾ, ಫಾದರ್ ಮುಲ್ಲರ್ ಸ್ಕೂಲ್ ಆ್ಯಂಡ್ ನರ್ಸಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಅಗ್ನೇಸ್ ಇ.ಜೆ , ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮುಖ್ಯ ನರ್ಸಿಂಗ್ ಅಧಿಕಾರಿ ಭಗಿನಿ ನ್ಯಾನ್ಸಿ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಸ್ಕೂಲ್ ಆ್ಯಂಡ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಭಗಿನಿ ಧನ್ಯಾ ದೇವಾಸಿಯಾ ಸ್ವಾಗತಿಸಿದರು. ಪ್ರೊ.ಪಾತಿಮಾ ವೈಲೆಟ್ ಫೆರ್ನಾಂಡಿಸ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News