×
Ad

ಸಮಸ್ಯೆಯನ್ನು ಗುರುತಿಸುವುದೇ ಸವಾಲು: ವಾಸುದೇವ ಕಾಮತ್

ಪಿ.ಎ.ಕಾಲೇಜಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2025-10-17 19:15 IST

ಕೊಣಾಜೆ: ಪ್ರಸ್ತುತ ಜಗತ್ತಿನಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ದೊಡ್ಡ ಸವಾಲಲ್ಲ ಸರಿಯಾದ ಸಮಸ್ಯೆ ಯನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ. 'ಅವಶ್ಯಕತೆ ಆವಿಷ್ಕಾರದ ತಾಯಿ” ಎಂಬ ಮಾತಿನಂತೆ, ನಾವು ಹೊಸ ಆವಿಷ್ಕಾರಗಳನ್ನು ಮಾಡುವಾಗ ನಿಜವಾಗಿಯೂ ಜನರಿಗೆ ಸಹಾಯವಾಗುತ್ತಿದೆಯೇ ಅಥವಾ ಅವರನ್ನು ಮತ್ತಷ್ಟು ಆಲಸ್ಯರನ್ನಾಗಿ ಮಾಡುತ್ತಿದೆಯೋ ಎಂಬುವುದನ್ನು ವಿಶ್ಲೇಷಿಸಬೇಕಿದೆ ಎಂದು ಇನ್ಫೋಸಿಸ್ ಮಂಗಳೂರು ಇದರ ಮುಖ್ಯಸ್ಥ ವಾಸುದೇವ ಕಾಮತ್ ತಿಳಿಸಿದರು.

ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ 'ಐಈ ಈ ಈ ಇಂಟರ್ನ್ಯಾಷನಲ್ ಕಾನ್ಫರೆನ್ ಆನ್ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ , ವಿಎಲ್ಎಸ್ಐ , ಎಲೆಕ್ಟ್ರಿಕಲ್ಸರ್ಕ್ಯೂಟ್ಸ್ ಅಂಡ್ ರೋಬೋಟಿಕ್ಸ್ -ಐಈ ಈ ಈ ಡಿಸ್ಕವರ್ -2025' ಇದರ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸೈಬರ್ ದಾಳಿಗಳಿಂದ ರಕ್ಷಣೆ, ಡಿಜಿಟಲ್ ಸುರಕ್ಷತೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎನ್ನುವುದರ ಕುರಿತು ಚಿಂತನೆ ಮಾಡಬೇಕಿದೆ.‌ ಪ್ರಾಯೋಗಿಕ ಜ್ಞಾನ ಮತ್ತು ಪ್ರಯೋಗಾತ್ಮಕ ಅಧ್ಯಯನದ ಮೂಲಕ ಸಮಾಜಕ್ಕೆ ಸಹಾಯ ಮಾಡುವ ಹೊಸ ಆವಿಷ್ಕಾರಗಳನ್ನು ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಪುಸ್ತಕದ ಜ್ಞಾನದೊಂದಿಗೆ ಪ್ರಾಯೋಗಿಕ ಅನುಭವ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ . ಜನರ ಜೀವನ ಸುಧಾ ರಣೆಗೆ ಉಪಯೋಗವಾಗುವ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗ ಬೇಕು. ಆವಿಷ್ಕಾರಾತ್ಮಕ ಚಿಂತನೆಗಳಿಂ ನಮ್ಮ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವಂತಾಗಬೇಕು ಮತ್ತು ಸಮಸ್ಯೆಗಳನ್ನು ಗುರುತಿಸುವಂತೆ ಮಾಡಲು ಪ್ರೇರಣೆ ನೀಡಬೇಕು ಎಂದರು.

ಪಿಎ ಎಜ್ಯುಕೇಶನಲ್ ಟ್ರಸ್ಟ್ ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ , ಐಇಇಇ ಡಿಸ್ಕವರ್-2025 ಇದರ ಸಭಾಧ್ಯಕ್ಷರಾದ ಡಾ. ಎಸ್. ವಿ. ಸತ್ಯನಾರಾಯಣ, ಎನ್‌ಎಮ್‌ಎಮ್‌ಐಟಿ ಪ್ರಾಧ್ಯಾಪಕ ಡಾ. ವಾಸುದೇವ ಆಚಾರ್ಯ, ಕ್ಯಾಂಪಸ್ ಎಜಿಎಂ ಶರ್ಫುದ್ದೀನ್ ಪಿ. ಕೆ., ಪಿ ಎ ಪಿ ಟಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್, ಪಿ ಎ ಐ ಪಿ ಪ್ರಾಂಶುಪಾಲ ಡಾ. ಅಫೀಫಾ ಸಲೀಮ್, ಪಿ ಎ ಇ ಟಿ ಸ್ಟೂಡೆಂಟ್ ಅಫೇರ್ಸ್ ಇದರ ಡೀನ್ ಡಾ. ಸಯ್ಯದ್ ಅಮೀನ್ ಎ. , ಪಿ ಎ ಸಿಇ ಪ್ರಾಂಶುಪಾಲ ಡಾ. ರಮಿಝ್ ಎಂ. ಕೆ , ಕಾರ್ಯಕ್ರಮ ಸಂಘಟಕರಾದ ಡಾ.ಮಹಮ್ಮದ್ ಝಾಕಿರ್ ಹಾಗೂ ಡಾ.ಶರ್ಮಿಳಾ ಕುಮಾರಿ ಉಪಸ್ಥಿತರಿದ್ದರು.

ಇಂಟೆಲ್ ಕಾರ್ಪೋರೇಶನ್ ಬೆಂಗಳೂರು ಅನಾಲಾಗ್ ಐಪಿ ವಿನ್ಯಾಸ ನಿರ್ವಾಹಕ ಡಾ. ಜಾವೆದ್ ಜಿ. ಎಸ್ ಕೀ-ನೋಟ್ ಸ್ಪೀಕರ್ ಆಗಿ ಭಾಗವಹಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News