×
Ad

ಅಲ್ಪಸಂಖ್ಯಾತರ ಸರಳ ವಿವಾಹ| ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

Update: 2025-10-17 19:42 IST

ಮಂಗಳೂರು: ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಸಮುದಾಯದ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50,000 ರೂ. ಹಾಗೂ ಸಾಮೂಹಿಕ ವಿವಾಹವನ್ನು ಏರ್ಪಡಿಸುವ ಆಯೋಜಕರು ಗಳಿಗೆ ಪ್ರೋತ್ಸಾಹ, ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗಳಿಗೆ 5,000 ರೂ. ನೀಡಲಾಗುತ್ತದೆ.

ಸಾಮೂಹಿಕ ವಿವಾಹವನ್ನು ಏರ್ಪಡಿಸುವ ಆಯೋಜಕರುಗಳು ಕಾರ್ಯಕ್ರಮದ 7 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಮತ್ತು ವಿವಾಹ ನಡೆದ ದಿನಾಂಕದ 3 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ, ಮೌಲಾನಾ ಆಜಾದ್ ಭವನ, ಓಲ್ಡ್‌ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು- ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News