ಕರ್ನಾಟಕ ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ ಉದ್ಘಾಟನೆ
ಮಂಗಳೂರು, ಅ.23: ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (ಎಸ್‌ಎನ್‌ಇಸಿ) ಇದರ ಕರ್ನಾಟಕ ರಾಜ್ಯ ಘಟಕವನ್ನು ಬಿ.ಸಿ. ರೋಡ್‌ನಲ್ಲಿರುವ ರೋಟರಿ ಕ್ಲಬ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮುಷಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಪಾರಂಪರಿಕ ಆಶಯ ಆದರ್ಶಗಳನ್ನು ಪೂರ್ಣವಾಗಿ ಉಳಿಸಿಕೊಳ್ಳುವ ಸಮಸ್ತದ ಉನ್ನತ ಶಿಕ್ಷಣ ಯೋಜನೆಯಾಗಿರುವ ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲನ್ನು ಬಲಪಡಿಸಬೇಕಿದೆ ಎಂದರು.
ಕೌನ್ಸಿಲ್‌ನ ರಾಜ್ಯ ಘಟಕದ ಅಧ್ಯಕ್ಷ ಸಯ್ಯಿದ್ ಅಕ್ರಂ ಅಲಿ ತಂಳ್ ಅಧ್ಯಕ್ಷತೆ ವಹಿಸಿದರು. ಎಸ್‌ಎನ್‌ಇಸಿ ಅಕಾಡಮಿಕ್ ಕೌನ್ಸಿಲ್ ಚೇರ್‌ಮ್ಯಾನ್ ಶೈಖುನಾ ಅಬ್ದುಸ್ಸಲಾಂ ಬಾಖವಿ ವಡಕ್ಕೇಕಾಡ್ ಮುಖ್ಯ ಭಾಷಣಗೈದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಮತ್ತು ಸಯ್ಯಿದ್ ಶುಹೈಬ್ ತಂಳ್ ಮಾತನಾಡಿದರು. ಶಾಫಿ ದಾರಿಮಿ ಅಜ್ಜಾವರ, ಕೆ.ಎಂ.ಎ. ಕೊಡುಂಗಾಯಿ, ಅಬೂಸಾಲಿಹ್ ಹಾಜಿ, ಖತರ್ ಇಬ್ರಾಹಿಂ ಹಾಜಿ ಅನಿಸಿಕೆ ವ್ಯಕ್ತಪಡಿಸಿದರು.
ಅನೀಸ್ ಕೌಸರಿ, ಮೊಯ್ದು ನಿಝಾಮಿ, ಇಸ್ಮಾಯಿಲ್ ಯಮಾನಿ, ರಿಯಾಝ್ ರಹ್ಮಾನಿ, ಅಬ್ದುಲ್ ಹಮೀದ್ ಕಣ್ಣೂರ್, ಅಬೂಬಕರ್ ಮದನಿ ಕುಂಬ್ರ, ಮುಹಿಯ್ಯುದ್ದೀನ್ ಅನ್ಸಾರಿ, ಸಿರಾಜುದ್ದೀನ್ ದೇರಳಕಟ್ಟೆ, ಅಝೀಝ್ ಮಾಲಿಕ್, ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಸಫ್ವಾನ್ ಬಾಖವಿ, ಹಸನ್ ಹಾಜಿ ಸಿ.ಟಿ. ಬಝಾರ್ ಹಾಗೂ ಕೆಐಸಿ ಕುಂಬ್ರ, ವಾದಿತೈಬ ಕಿನ್ಯ, ದಾರುಲ್ ಹಸನಿಯ್ಯ ಸಾಲ್ಮರ, ಅಜುಮ್ ಕ್ಯಾಂಪಸ್ ಮೂಡುಬಿದಿರೆ, ಝೈನಿಯ್ಯ ಎಜುಗಾರ್ಡನ್ ಅಜ್ಜಾವರ ಸಂಸ್ಥೆಗಳ ವಿವಿಧ ಪ್ರತಿನಿಧಿಗಳು ತಾಲೂಕುವಾರು ಸಂಯೋಜಕರು, ರಾಜ್ಯ ಸಮಿತಿಯ ನೇತಾರರು ಭಾಗವಹಿಸಿದರು.
ಅಶ್ರಫ್ ಫೈಝಿ ಕೊಡಗು ಸ್ವಾಗತಿಸಿದರು. ಮುಹಮ್ಮದ್ ಕುಂಞಿ ಮಾಸ್ಟರ್ ವಂದಿಸಿದರು.