ಕೆಪಿಟಿ - ಏರ್‌ಪೋರ್ಟ್ ರಸ್ತೆ ಬದಿಯ ವ್ಯಾಪಾರ ನಿಷೇಧ
Update: 2025-10-23 20:56 IST
ಮಂಗಳೂರು,ಅ.23: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕೆ.ಪಿ.ಟಿ.ಯಿಂದ ಏರ್‌ಪೋರ್ಟ್‌ವರೆಗೆ ಬೀದಿಬದಿ ವ್ಯಾಪಾರ ಮುಕ್ತ ವಲಯ ಎಂದು ಈಗಾಗಲೇ ಘೋಷಿಸಲಾಗಿದೆ.
ಹಾಗಾಗಿ ಕೆಪಿಟಿಯಿಂದ ಏರ್‌ಪೋರ್ಟ್ ತನಕದ ರಸ್ತೆಯ ಎರಡೂ ಬದಿಯ ಫುಟ್‌ಪಾತ್‌ಗಳಲ್ಲಿ ಯಾವುದೇ ಬೀದಿಬದಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಈ ಸೂಚನೆ ಮೀರಿ ಯಾರಾದರು ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಕದ್ರಿ ವಲಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.