ಮಾದಕ ದ್ರವ್ಯ ಸೇವನೆ ಅರೋಪ: ಇಬ್ಬರ ಬಂಧನ
Update: 2025-10-27 21:15 IST
ಮಂಗಳೂರು: ನಗರದ ಶೇಡಿಗುರಿ ಮೈದಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಅಶೋಕ ನಗರದ ಕುಂದರ್ ಕಾಂಪೌಂಡ್ ನಿವಾಸಿ ಶರತ್ ಕುಮಾರ್ (31) ಮತ್ತು ಸುಲ್ತಾನ್ ಬತ್ತೇರಿ ನಿವಾಸಿ ಮಂಜುನಾಥ ಸಂಗಪ್ಪಾ ನಾಗೂರು (25) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಅ.26ರಂದು ಸಿಗರೇಟಿನಲ್ಲಿ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದಾಗ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.