ರಾಜ್ಯೋತ್ಸವ ಸಾಹಿತ್ಯ ಪರ್ವ: ಡಾ. ವಾದಿರಾಜ ಕಲ್ಲೂರಾಯ ಲೇಖನಕ್ಕೆ ಪ್ರಥಮ ಸ್ಥಾನ
Update: 2025-10-31 20:23 IST
ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಬೆಳಕು ಪ್ರತಿಷ್ಠಾನ ಆಯೋಜಿಸಿದ್ದ ಪ್ರತಿಷ್ಠಿತ 'ಸಾಹಿತ್ಯ ಪರ್ವ' ಸ್ಪರ್ಧೆಯ ವ್ಯಕ್ತಿಚಿತ್ರ ವಿಭಾಗದಲ್ಲಿ, ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅವರು ಬರೆದ ಲೇಖನ ಪ್ರಥಮ ಸ್ಥಾನ ಗಳಿಸಿದೆ.
ಡಾ.ವಾದಿರಾಜ ಕಲ್ಲೂರಾಯ ಅವರು ಎಕ್ಸಲೆಂಡ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಅವರ ಕುರಿತು ಬರೆದ ಅಕ್ಷರ ಯೋಗಿಯ ಅಕ್ಷರ ಕ್ರಾಂತಿ' ಲೇಖನಕ್ಕೆ ಗೌರವ ಲಭಿಸಿದೆ. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.