ಸುರತ್ಕಲ್| "ಯುನಿಟಿ ರನ್" ಕಾರ್ಯಕ್ರಮ
Update: 2025-10-31 20:27 IST
ಸುರತ್ಕಲ್: ಭಾರತ ದೇಶದ ಪ್ರಥಮ ಉಪ ಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಹುಟ್ಟು ಹಬ್ಬದ ಪ್ರಯುಕ್ತ ಸುರತ್ಕಲ್ ಪೊಲೀಸ್ ಠಾಣೆಯ ವತಿಯಿಂದ "ಯುನಿಟಿ ರನ್" ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ನಡೆಯಿತು.
ಯುನಿಟಿ ರನ್ ಕಾರ್ಯಕ್ರಮವನ್ನು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ. ಅವರು ನೆರವೇರಿಸಿದರು.
ಗುಡ್ಡೆಕೊಪ್ಪಳ ಬೀಚ್ ನಿಂದ ಆರಂಭಗೊಂಡ ರನ್ ಎನ್‌ಐಟಿಕೆ ಲೈಟ್ ಹೌಸ್ ಬೀಚ್ ವರೆಗೂ ನಡೆಯಿತು. ಕಾರ್ಯಕ್ರಮದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಘು ನಾಯಕ್, ರಾಘವೇಂದ್ರ ನಾಯಕ್ ಮತ್ತು ಠಾಣಾ ಸಿಬ್ಬಂದಿ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ, ಗೋವಿಂದಾಸ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಶೇಷಾದ್ರಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿದ್ದರು.