×
Ad

ಪಕ್ಕಲಡ್ಕದಲ್ಲಿ ಸೈಬರ್ ಅಪರಾದದ ಬಗ್ಗೆ ಜನ ಜಾಗೃತಿ ಸಭೆ

Update: 2025-11-01 19:26 IST

ಮಂಗಳೂರು, ನ.1: ಪಕ್ಕಲಡ್ಕ ಜಮಾಅತೆ ಇಸ್ಲಾಮಿ ವತಿಯಿಂದ ಸೈಬರ್ ಅಪರಾಧದ ಬಗ್ಗೆ ಜನಜಾಗೃತಿ ಸಭೆಯು ಸ್ನೇಹ ಸದನದ ಮರ್ಹೂಮ್ ಇಬ್ರಾಹಿಂ ಸಈದ್ ಸಭಾಂಗಣದಲ್ಲಿ ನಡೆಯಿತು.

ನ್ಯಾಯವಾದಿ ಸರ್ಫರಾಝ್ ಸೈಬರ್ ಅಪರಾಧ ಮತ್ತು ಅದರ ವಂಚನೆಗೆ ಸಾರ್ವಜನಿಕರು ಹೇಗೆ ಬಲಿಯಾಗುತ್ತಿ ದ್ದಾರೆ. ಸೈಬರ್ ವಂಚನೆಯಿಂದ ಕೇವಲ ಹಣ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಸಹಾ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಕನಾಡಿ ಪೊಲೀಸ್ ಠಾಣೆಯ ಎಸ್ಸೈ ಯೋಗೇಶ್ವರ್ ಸೈಬರ್ ಅಪರಾದ, ಮಾದಕ ವ್ಯಸನ, ವಂಚನೆ ಇತ್ಯಾದಿಗಳ ಬಗ್ಗೆ ಹೆತ್ತವರು ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು. ಬಂಧನವಾದ ಬಳಿಕ ಖೇದಿಸದೆ ಮಕ್ಕಳನ್ನು ಮುಂಜಾಗ್ರತೆ ವಹಿಸಬೇಕು ಎಂದರು.

ಕಾನ್‌ಸ್ಟೇಬಲ್ ಪ್ರಶಾಂತ್, ಪ್ರದೀಪ್, ನಟರಾಜ್ ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿದರು. ಅತಿಥಿಯಾಗಿ ಪಕ್ಕಲಡ್ಕ ಮುಹಿಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಲ್ತಾಫ್ ಇಸ್ಮಾಯಿಲ್ ಭಾಗವಹಿಸಿದರು. ಜಮಾಅತೇ ಇಸ್ಲಾಮಿ ಮಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಸಮೀರ್ ದೀನ್ ಅಧ್ಯಕ್ಷತೆ ವಹಿಸಿದರು. ಬಿಲಾಲ್ ಪಕ್ಕಲಡ್ಕ, ಮೊಯಿದಿನ್ ಪಕ್ಕಲಡ್ಕ, ಸಲೀಮ್ ಮಲಾರ್, ಮಹಿಳಾ ಘಟಕದ ಸಂಚಾಲಕಿ ಝೀನತ್ ಮೊಯಿದಿನ್ ಉಪಸ್ಥಿತರಿದ್ದರು.

ಮುಸ್‌ಅದ್ ಕಿರಾಅತ್ ಪಠಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಪಕ್ಕಲಡ್ಕ ವರ್ತುಲ ಸಂಚಾಲಕ ಸುಲೈಮಾನ್ ಪಕ್ಕಲಡ್ಕ ವಂದಿಸಿದರು. ಕಾರ್ಯದರ್ಶಿ ಅಶೀರುದ್ದೀನ್ ಆಲಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News