ಉತ್ತರ ಪ್ರದೇಶದ ರಾಜ್ಯಪಾಲರನ್ನು ಭೇಟಿಯಾದ ಕರ್ನಾಟಕ, ತ್ರಿಪುರದ ಪತ್ರಕರ್ತರ ಅಧ್ಯಯನ ತಂಡ
ಲಕ್ನೋ, ಮಾ.6: ಉತ್ತರ ಪ್ರದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕ ಮತ್ತು ತ್ರಿಪುರದ ಪತ್ರಕರ್ತರು ಶುಕ್ರವಾರ ಗುಜರಾತ್ ನ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಲಕ್ನೋದ ರಾಜಭವನದಲ್ಲಿ ಭೇಟಿಯಾದರು.
ಪಿಐಬಿ ಆಯೋಜಿಸಿರುವ ಅಧ್ಯಯನ ಪ್ರವಾಸದಲ್ಲಿ ಪತ್ರಕರ್ತರು ರಾಜ್ಯಪಾಲರೊಂದಿಗೆ ಸಂವಾದ ನಡೆಸಿದರು.
ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ತಮ್ಮ ಆಡಳಿತಾತ್ಮಕ ಅನುಭವಗಳು ಮತ್ತು ರಾಜ್ಯದಲ್ಲಿ ಶಿಕ್ಚಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.
ಉತ್ತರ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ರಾಜ್ಯ ಸರಕಾರ ಅನುಷ್ಠಾನ ಗೊಳಿಸಿರುವ ಯೋಜನೆಗಳು, ಮಹಿಳಾ ಸಬಲೀಕರಣ ಯೋಜನೆಗಳ ಬಗ್ಗೆ ವಿವರಿಸಿದರು.
ಆರು ದಿನಗಳ ಉತ್ತರ ಪ್ರದೇಶದ ಅಧ್ಯಯನ ಪ್ರವಾಸದ ಕೊನೆಯಲ್ಲಿ ರಾಜ್ಯಪಾಲರನ್ನು ಭೇಟಿಯಾಗಲು ತೆರಳಿದ ಕರ್ನಾಟಕದ 10 ಮಂದಿ ಪತ್ರಕರ್ತರ ನಿಯೋಗದೊಂದಿಗೆ ತ್ರಿಪುರದ ಪತ್ರಕರ್ತರು ಸಾಥ್ ನೀಡಿದರು.
ಉಭಯ ರಾಜ್ಯಗಳ ಪತ್ರಕರ್ತರು ವಿಚಾರ ವಿನಿಮಯ ನಡೆಸಿದರು. ರಾಜಭವನದ ಅಧಿಕಾರಿಗಳು, ಪಿಐಬಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.