ಮನಪಾ: ಮಾ.1ರಂದು ನೀರಿನ ಬಿಲ್ ಪರಿಷ್ಕರಣೆಗೆ ಅವಕಾಶ
Update: 2024-02-29 18:33 IST
ಮಂಗಳೂರು, ಫೆ. 29: ನೀರಿನ ಬಲ್ಲಿನಲ್ಲಿ ಕಂಡು ಬಂದತಹ ಸಮಸ್ಯೆಗೆ ಸಂಬಂಧಿಸಿ ಸಾರ್ವಜನಿಕರು ಈಗಾಗಲೇ ನೀಡಲಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಮಾ. 1ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಬೆಳಗ್ಗೆ 11ರಿಂದ ಸಂಜೆ 5.30 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈಗಾಗಲೇ ಪಾಲಿಕೆಗೆ ನೀಡಿರುವ ಅರ್ಜಿಯ ಪ್ರತಿ ಹಾಗೂ ಪಾಲಿಕೆಯ ನೀರಿನ ಬಿಲ್ಲನ್ನು ಸಲ್ಲಿಸಿದರೆ ತಕ್ಷಣವೇ ಬಿಲ್‌ನ ದೋಣ ಸರಿಪಡಿಸಿ ಬಿಲ್ ಪರಿಷ್ಕರಿಸಿ ನೀಡಲಾಗುವುದು ಹಾಗೂ ಪರಿಷ್ಕರಿಸಿದ ನೀರಿನ ಬಿಲ್ 15 ದಿನಗಳೊಳಗೆ ಪಾವತಿಸಲು ಅನುವು ಮಾಡಿ ಕೊಡಲಾಗುವುದು ಎಂದು ಮೇಯರ್ ಪ್ರಕಟನೆ ತಿಳಿಸಿದೆ.