×
Ad

ಮೇ 10ರಂದು ಬ್ಯಾರಿ: ಭಾಷಾ ಸೌಹಾರ್ದ ಸೊಬಗು ಕಾರ್ಯಕ್ರಮ

Update: 2025-05-08 20:39 IST

ಮಂಗಳೂರು, ಮೇ 8: ಮಂಗಳೂರು ವಿವಿ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಸಹಯೋಗದಲ್ಲಿ ಮೇ 10ರಂದು ಬೆಳಗ್ಗೆ 10ಕ್ಕೆ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಸಭಾಂಗಣದಲ್ಲಿ ಬ್ಯಾರಿ: ಭಾಷಾ ಸೌಹಾರ್ದ ಸೊಬಗು ಕಾರ್ಯಕ್ರಮ ನಡೆಯಲಿದೆ.

ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್‌ನ ಸಂಚಾಲಕ ಅಬ್ದುಲ್ ರಹ್ಮಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್‌ನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹ್ಮದ್ ಯು.ಟಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ತುಳು ಅಕಾಡಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಭಾಗವಹಿಸಲಿದ್ದಾರೆ.

ಬ್ಯಾರಿ: ಭಾಷಾ ಸೌಹಾರ್ದ ಸೊಬಗು ವಿಚಾರಗೋಷ್ಠಿಯಲ್ಲಿ ಬ್ಯಾರಿ ಅಕಾಡಮಿಯ ಮಾಜಿ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು (ಬ್ಯಾರಿ-ಕನ್ನಡ), ಲೇಖಕಿ ಅತ್ರಾಡಿ ಅಮೃತಾ ಶೆಟ್ಟಿ (ಬ್ಯಾರಿ-ತುಳು), ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ (ಬ್ಯಾರಿ-ಮಲಯಾಳಂ), ಪತ್ರಕರ್ತ ಮುಹಮ್ಮದ್ ಯೂನುಸ್ (ಬ್ಯಾರಿ-ಕೊಡವ), ಇಕ್ರಾ ಅರಬಿಕ್ ಸ್ಕೂಲ್‌ನ ಉಪನ್ಯಾಸಕ ಮುಹಮ್ಮದ್ ಫರ್ಹಾನ್ ನದ್ವಿ (ಬ್ಯಾರಿ-ಅರಬಿಕ್) ವಿಷಯ ಮಂಡಿಸಲಿದ್ದಾರೆ. ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಟಿ. ವಿಚಾರಗೋಷ್ಠಿಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿ ದ್ದಾರೆ ಎಂದು ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್, ಮಂಗಳೂರು ವಿವಿ ಕುಲಸಚಿವ ರಾಜು ಕೆ. ಮೊಗವೀರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News