×
Ad

ಮೇ 15ರಿಂದ ಶ್ರೀಗುರುಪುರ ಕ್ಷೇತ್ರದಲ್ಲಿ ಮಹಾಕಾಳೇಶ್ವರ ಪ್ರತಿಷ್ಠಾ ಬ್ರಹ್ಮ ಕಲಶ ಸಂಭ್ರಮ

Update: 2025-05-09 21:26 IST

ಮಂಗಳೂರು: ಶ್ರೀ ಕ್ಷೇತ್ರ ಗುರುಪು ರದಲ್ಲಿ ದಕ್ಷಿಣ ಭಾರತದ ಪ್ರಥಮ ಶ್ರೀ ಗುರು ಮಹಾಕಾಲೇಶ್ವರ ದೇವರ ಬೃಹತ್ ಏಕ ಶಿಲಾ ಮೂರ್ತಿಯ ಮಹಾ ಚೈತನ್ಯ ಪ್ರತಿಷ್ಠೆ,ಬ್ರಹ್ಮ ಕಲಶ ಮಹೋತ್ಸವ ಮೇ 15, 16, 17ರಂದು ನಡೆಯಲಿದೆ‌ ಎಂದು ಬ್ರಹ್ಮ ಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಗುರುಗಳಾದ ಶ್ರೀ ಕೆ.ಎಸ್ .ನಿತ್ಯಾನಂದರ ಮಾರ್ಗದರ್ಶನ ಮತ್ತು ನಿರ್ದೇಶನದ ಪ್ರಕಾರ ಶ್ರೀ ಕ್ಷೇತ್ರ ಗುರುಪುರ ಗೋಳಿದಡಿ ಪ್ರದೇಶ ಕ್ಷೇತ್ರದ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಮೂಲಕ ಎರಡು ವರ್ಷದಲ್ಲಿ ಪೀಠ ಸಹಿತ 45ಅಡಿ ಎತ್ತರದ ಮಹಾಕಾಳೇಶ್ವರ ಏಕ ಶಿಲಾ ವಿಗ್ರಹ ನಿಂತ ಭಂಗಿಯಲ್ಲಿ ನಿರ್ಮಾಣವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಯವರು ತಿಳಿಸಿದಂತೆ ಈ ವಿಗ್ರಹಕ್ಕೆ ಭಕ್ತರು ಸ್ವತಃ ಪೂಜೆ ಸಲ್ಲಿಸುವ ಅವಕಾಶ ಎಲ್ಲರಿಗೂ ಲಭಿಸಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಶ್ರೀ ಗುರು ಮಹಾ ಕಾಲೇಶ್ವರ ರಿಲೀಜಿಯಸ್ ಟ್ರಸ್ಟ್ ನ ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ, ಬ್ರಹ್ಮ ಕಲಶ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಕಾರ್ಯದರ್ಶಿಗಳಾದ ಸತೀಶ್ ಕಾವ,ಸುನಿಲಾ ಪ್ರಭಾಕರ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲ್,ಸಂಚಾಲಕ ಸುನಿಲ್ ಕುಮಾರ್ ಸುವರ್ಣ, ಸ್ವಾಗತ ಸಮಿತಿಯ ಕಾರ್ಯ ದರ್ಶಿ ದಿವ್ಯಾ ರತನ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News