×
Ad

ಕೊಡಾಜೆ : ಡಿ. 16ರಂದು ಅನುಸ್ಮರಣೆ, ಮತ ಪ್ರಭಾಷಣ ಹಾಗೂ ಬುರ್ದಾ ಮಜ್ಲಿಸ್

Update: 2023-12-14 18:12 IST

ಬಂಟ್ವಾಳ: ಕೊಡಾಜೆ ಹಾಗೂ ನೇರಳಕಟ್ಟೆ ಶಾಖಾ ಎಸ್ಕೆಎಸ್ಸೆಸ್ಸೆಫ್ ಇದರ 6 ನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ, ಮತ ಪ್ರಭಾಷಣ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಡಿ.16 ರಂದು ಕೊಡಾಜೆಯ ತರ್ಬಿಯತುಲ್ ಇಸ್ಲಾಂ ಮದರಸ ವಠಾರದ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಸಯ್ಯಿದ್ ಅಲಿ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದು, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲು ದು:ಹಾ ನೆರವೇರಿಸುವರು. ಕೊಡಾಜೆ ಹಾಗೂ ನೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್ ಶಾಖಾದ್ಯಕ್ಷ ಹನೀಫ್ ಅನಂತಾಡಿ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ವಳಚ್ಚಿಲ್ ಖತೀಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಕೊಡಾಜೆ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಪಾಂಡವರಕಲ್ಲು ಖತೀಬ್ ಅಬ್ದುಲ್ ರಹಿಮಾನ್ ಫೈಝಿ ಕೊಡಾಜೆ ಸಹಿತ ಹಲವಾರು ಗಣ್ಯರು ಭಾಗವಹಿ ಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News