ನ. 2: ಎಸ್‌ವೈಎಸ್ ದ.ಕ. ವೆಸ್ಟ್ ಜಿಲ್ಲಾ ಕೌನ್ಸಿಲರ್ಸ್ ಕಾಂಕ್ಲೇವ್
Update: 2025-11-01 19:21 IST
ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ರೆನ್‌ಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಸುವ ಕೌನ್ಸಿಲರ್ಸ್ ಕಾಂಕ್ಲೇವ್ ನ.2ರ ಮದ್ಯಾಹ್ನ 2ಕ್ಕೆ ಅಡ್ಯಾರ್‌ನ ಅಲ್ ಹಸನ್ ಅಕಾಡಮಿಯಲ್ಲಿ ನಡೆಯಲಿದೆ.
ಎಸ್‌ವೈಎಸ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ತಂಳ್ ಎರುಮಾಡು, ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಭಾಗವಹಿಸಲಿದ್ದಾರೆ ಎಂದು ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.